ರಾಮೇಶ್ವರಂ: ಅಂತರರಾಷ್ಟ್ರೀಯ ಸಮುದ್ರ ಗಡಿ (ಐಎಂಬಿಎಲ್) ದಾಟಿದ್ದಾರೆಂಬು ಆರೋಪ ಮಾಡಿರುವ ಶ್ರೀಲಂಕಾ ನೌಕಾಪಡೆ 12 ಮಂದಿ ಭಾರತೀಯ ಮೀನುಗಾರರನ್ನು ಸೋಮವಾರ ರಾತ್ರಿ ಬಂಧನಕ್ಕೊಳಪಡಿಸಿದೆ ಎಂದು ತಿಳಿದುಬಂದಿದೆ.
ಕಚ್ಚತೀವು ಸಮೀಪ ಮೀನುಗಾರಿಕೆಯಲ್ಲಿ ನಿರತರಾಗಿದ್ದ ಮೀನುಗಾರರನ್ನು ಬಂಧನಕ್ಕೊಳಪಡಿಸಲಾಗಿದ್ದು, ಮೀನುಗಾರರ ದೋಣಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮೀನುಗಾರರ ಸಂಘಟನೆಯ ಅಧ್ಯಕ್ಷರು ಹೇಳಿಕೊಂಡಿದ್ದಾರೆ.
ಸೆ.5ರಂದು ತಮಿಳುನಾಡಿನ ಮೀನುಗಾರರ ಗುಂಪೊಂದರ ಮೇಲೆ ಶ್ರೀಲಂಕಾ ನೌಕಾಪಡೆ ದಾಳಿ ಮಾಡಿತ್ತು. ಅಲ್ಲದೆ, ಮೀನುಗಾರರ ದೋಣಿಗಳು, ಸಾಮಾಗ್ರಿಗಳನ್ನು ನಾಶಪಡಿಸಿತ್ತು. ಸೆ.2ರಂದು ಕೂಡ ಮೂವರು ತಮಿಳುನಾಡು ಮೀನುಗಾರರನ್ನು ಬಂಧನಕ್ಕೊಳಪಡಿಸಿತ್ತು.