ನವದೆಹಲಿ: ತನ್ನ ಗೆಳೆಯನೊಂದಿಗೆ ಸ್ವಚ್ಛವಾಗಿ ಇಂಗ್ಲೀಷ್ ಭಾಷೆಯನ್ನು ಮಾಡಿನಾಡಿದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯೊಂದು ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ವರುಣ್ ಗುಲಾಟಿ ಥಳಿತಕ್ಕೊಳಗಾದ ಯುವಕನಾಗಿದ್ದಾನೆ. ದೆಹಲಿ ಲುಟೆನ್ಸ್ ನಲ್ಲಿರುವ ಪಂಚತಾರಾ ಹೋಟೆಲ್ ಸಮೀಪ ತನ್ನ ಸ್ನೇಹಿತ ಅಮನ್ ಎಂಬಾತನನ್ನು ಆತನ ಸ್ನೇಹಿತ ದಕ್ಷ ಎಂಬಾತನ ಕಾರಿನಲ್ಲಿ ಡ್ರಾಪ್ ಮಾಡಲು ಬಂದಿದ್ದಾನೆ. ಬಳಿಕ ಅಮನ್ ಜೊತೆಗೆ ಇಂಗ್ಲೀಷ್ ನಲ್ಲಿ ಮಾತನಾಡಿ ಕಳುಹಿಸಿಕೊಟ್ಟಿದ್ದಾನೆ.
ಈ ವೇಳೆ ಸ್ಥಳದಲ್ಲಿದ್ದ ಐವರು ವ್ಯಕ್ತಿಗಳ ಗುಂಪೊದು ವರುಣ್ ನನ್ನು ಸುತ್ತುವರೆದು, ನೀನು ಯಾಕೆ ಇಂಗ್ಲೀಷ್ ನಲ್ಲಿ ಮಾತನಾಡೋದು ಎಂದು ಜಗಳಕ್ಕೆ ನಿಂತಿದ್ದಾರೆ. ಈ ವೇಲೆ ವರುಣ್ ಹಾಗೂ ದಾಳಿಕೋರರ ನಡುವೆ ಮಾತಿನ ಚಕಮಕಿ ನಡೆದಿದೆ. ವರುಣ್ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆ ಬಳಿಕ ದಾಳಿಕೋರರು ವಾಹನದಲ್ಲಿ ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ವರುಣ್ ದಾಳಿಕೋರರ ವಾಹನದ ಸಂಖ್ಯೆಯನ್ನು ದಾಖಲು ಮಾಡಿಕೊಂಡಿದ್ದಾರೆ. ವರುಣ್ ಅವರು ನೀಡಿರುವ ವಾಹನದ ಸಂಖ್ಯೆಯನ್ನು ಆಧರಿಸಿ ಪೊಲೀಸರು ಇದೀಗ ಐವರು ದಾಳಿಕೋರರಲ್ಲಿ ಮೂವರನ್ನು ಬಂಧನಕ್ಕೊಳಪಡಿಸಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics