ನವದೆಹಲಿ: ಸ್ಪ್ಯಾನಿಶ್ - ಆಸ್ಟ್ರೇಲಿಯನ್ ನಟಿ ನಥಾಲಿಯಾ ರೊಮ್ಸ್ ಇತ್ತೀಚೆಗೆ ತಮ್ಮ ಟ್ವಿಟ್ಟರ್ ನಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
25 ವರ್ಷದ ಹಾಲಿವುಡ್ ನಟಿ ನಥಾಲಿಯಾ ರೊಮ್ಸ್ ಅಮೆರಿಕಾದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆಗಿರುವ ಫೋಟೋವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.
ಅದಕ್ಕೆ ಲಾಸ್ಟ್ ನೈಟ್ ವಿಥ್ ರಾಹುಲ್ ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರತರವಾದ ಪ್ರತಿಕ್ರಿಯೆಗಳು ವ್ಯಕ್ತ ವಾಗಿವೆ.
ಸ್ಪೇನ್ ಮೂಲದ ಹಾಲಿವುಡ್ ನಟಿ ನಥಾಲಿಯಾ ರೊಮ್ಸ್ ಸ್ಪಾನಿಷ್ ಬಟ್ರ್ಸ್ ಜಿಲ್ , ಹೌಸ್ ಆಫ್ ಆನ್ಬಿಸ್, 31 ನಾರ್ತ್ 62 ಈಸ್ಟ್ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.