ಹನಿಪ್ರೀತ್ - ರಾಮ್ ರಹೀಮ್ ಸಿಂಗ್
ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ಆಪ್ತರಾದ ಹನಿಪ್ರೀತ್, ಪವನ್ ಇನ್ಸಾನ್ ಹಾಗೂ ಆದಿತ್ಯ ಇನ್ಸಾನ್ ಅವರ ವಿರುದ್ಧ ಅಂತರಾಷ್ಟ್ರೀಯ ಅಲರ್ಟ್ ಘೋಷಿಸಲಾಗಿದೆ ಎಂದು ಹರಿಯಾಣ ಪೊಲೀಸ್ ಮಹಾ ನಿರ್ದೇಶಕ ಬಿ ಎಸ್ ಸಂಧು ಅವರು ಶನಿವಾರ ಹೇಳಿದ್ದಾರೆ.
ಈ ಮೂವರ ವಿರುದ್ಧ ಹರಿಯಾಣ ಪೊಲೀಸರು ರಾಜದ್ರೋಹ ಪ್ರಕರಣ, ಹಿಂಸಾಚಾರಕ್ಕೆ ಪ್ರಚೋದನೆ ಹಾಗೂ ಅಪರಾಧ ಕೃತ್ಯಕೆ ಸಂಚು ರೂಪಿಸಿದ ಆರೋಪದ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪೊಲೀಸರ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದ ಬಿ ಎಸ್ ಸಂಧು ಅವರು, ಪೊಲೀಸರು ಸ್ವತಂತ್ರವಾಗಿ ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.
ಹನಿಪ್ರೀತ್, ಪವನ್ ಇನ್ಸಾನ್ ಹಾಗೂ ಆದಿತ್ಯ ಇನ್ಸಾನ್ ಅವರಿಗೆ ಸೇರಿದ ಖಾಸಗಿ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.
ಆಗಸ್ಟ್ 25ರಂದು ಪಂಚಕುಲ ಸಿಬಿಐ ಕೋರ್ಟ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ಘೋಷಿಸಿದ ನಂತರ ನಡೆದ ಹಿಂಸಾಚಾರ ಪ್ರಕರಣದ ತನಿಖೆ ಸರಿಯಾದ ಮಾರ್ಗದಲ್ಲೇ ನಡೆಯುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics