ದೇವಿ ದುರ್ಗಾ ಮಾತೆ 
ದೇಶ

ದೇವಿ ದುರ್ಗಾ ಮಾತೆಯನ್ನು ವೇಶ್ಯೆಯೆಂದ ದೆಹಲಿ ವಿವಿ ಪ್ರಾಧ್ಯಾಪಕ: ಪ್ರಕರಣ ದಾಖಲು

ಹಿಂದೂಗಳ ಆರಾಧ್ಯ ದೇವತೆ ದೇವಿ ದುರ್ಗಾ ಮಾತೆ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಶ್ಲೀಲ ಭಾಷೆ ಬಳಕೆ ಮಾಡಿ ಪೋಸ್ಟ್ ಹಾಕಿದ್ದ ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ...

ನವದೆಹಲಿ: ಹಿಂದೂಗಳ ಆರಾಧ್ಯ ದೇವತೆ ದೇವಿ ದುರ್ಗಾ ಮಾತೆ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಶ್ಲೀಲ ಭಾಷೆ ಬಳಕೆ ಮಾಡಿ ಪೋಸ್ಟ್ ಹಾಕಿದ್ದ ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ. 
ಕೇದಾರ್ ಕುಮಾರ್ ಮಂಡಲ್ ಎಂಬ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ತಮ್ಮ ಫೇಸ್ ಬುಕ್ ನಲ್ಲಿ ಭಾರತದ ಪುರಾಣಗಳಲ್ಲಿ ಬರುವ ದುರ್ಗಾ ಅತ್ಯಂತ 'ಸೆಕ್ಸಿ ವೇಶ್ಯೆ' ಎಂದು ಕೀಳಾಗೆ ಬರೆದಿದ್ದ. ಸೆಪ್ಟೆಂಬರ್ 22 ರಂದು ಸಂಜೆ ಸುಮಾರು 6.43ರ ಸುಮಾರಿಗೆ ಈ ಪೋಸ್ಟ್ ಪ್ರಕಟವಾಗಿತ್ತು. 
ಕೇದಾರ್ ಅವರ ಈ ಪೋಸ್ಟ್'ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಅಂಗಸಂಸ್ಥೆಯಾಗಿರುವ ನ್ಯಾಷನಲ್ ಡೆಮೋಕ್ರಟಿಕ್ ಫ್ರಂಟ್ ಕೇದಾರ್ ಮಂಡಲ್ ವಿರುದ್ಧ ದೆಹಲಿಯ ಲೋಧಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. 
ಕೇದಾರ್ ಅವರ ಈ ಪೋಸ್ಟ್ ಗೆ ಎಬಿವಿಪಿ, ಎನ್ಎಸ್'ಯುಐ ಸೇರಿದಂತೆ ಇನ್ನಿತರೆ ವಿದ್ಯಾರ್ಥಿ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತಿದ್ದು, ದೆಹಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕೂಡಲೇ ಮಂಡಲ್ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸುತ್ತಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ