ನವದೆಹಲಿ: ಮುಂಬೈ ನ ಛತ್ರಪತಿ ಶಿವಾಜಿ ಇಂಟರ್ ನ್ಯಾಷನಲ್ ಏರ್ಪೋರ್ಟ್(ಸಿಎಸ್ಐಎ) ಯ ಸಿಐಎಸ್ ಎಫ್ ಭದ್ರತೆ ವಿಶ್ವದಲ್ಲೆ ಅತ್ಯುತ್ಕೃಷ್ಟವಾದದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗ್ಲೋಬಲ್ ಕ್ವಾಲಿಟಿ ರೇಟಿಂಗ್ ಏಜೆನ್ಸಿ ಮುಂಬೈ ವಿಮಾನ ನಿಲ್ದಾಣವನ್ನು ವಿಶ್ವದಲ್ಲೇ ಅತ್ಯುತ್ತಮ ಸಿಐಎಸ್ಎಫ್ ಭದ್ರತೆ ಹೊಂದಿರುವ ವಿಮಾನ ನಿಲ್ದಾಣವಾಗಿದೆ ಎಂದು ಘೋಷಿಸಿದೆ. ಹ್ಯಾಂಡ್ ಬ್ಯಾಗೇಜ್ ಗೆ ಟ್ಯಾಗಿಂಗ್ ಹಾಗೂ ಸ್ಟಾಂಪಿಂಗ್ ಪದ್ದತಿಯನ್ನು ಕೈಬಿಟ್ಟಿದ್ದು, ಸಿಐಎಸ್ಎಫ್ ಸಿಬ್ಬಂದಿಗಳ ಸಹಾಯ, ಪ್ರಯಾಣಿಕರು ಮರೆತು ಹೋಗಿದ್ದ ವಸ್ತುಗಳನ್ನು ಹಿಂತಿರುಗಿಸುವುದು ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಸಿಐಎಸ್ ಎಫ್ ಭದ್ರತೆಯನ್ನು ಉತ್ತಮವಾದುದ್ದು ಎಂದು ಘೋಷಿಸಲಾಗಿದೆ.