ಯಾಂಗೂನ್: ಮ್ಯಾನ್ಮಾರ್ ನ ಹಿಂಸಾಚಾರ ಪೀಡಿತ ರಖೀನೆ ರಾಜ್ಯದಲ್ಲಿ ಹಿಂದೂಗಳ ಸಾಮೂಹಿಕ ಸಮಾಧಿ ಪತ್ತೆಯಾದ ನಂತರ, ನಾಪತ್ತೆಯಾಗಿರುವ ಇನ್ನಷ್ಟು ಹಿಂದೂಗಳ ಮೃತದೇಹಗಳಿಗಾಗಿ ಅಲ್ಲಿನ ಸೇನಾ ಪಡೆಗಳು ಹುಡುಕಾಟ ಮುಂದುವರೆಸಿವೆ ಎಂದು ಮಂಗಳವಾರ ತಿಳಿದುಬಂದಿದೆ.
ರೊಹಿಂಗ್ಯಾ ಮುಸ್ಲಿಂ ಉಗ್ರರು ಸುಮಾರು 100 ಹಿಂದೂಗಳನ್ನು ಅಪಹರಿಸಿ 92 ಮಂದಿಯನ್ನು ಹತ್ಯೆ ಮಾಡಿದ್ದು, ಇದರಲ್ಲಿ 8 ಮಹಿಳೆಯರನ್ನು ಇಸ್ಲಾಂ ಧರ್ಮಕ್ಕೆ ಮಂತಾಂತರಿಸಿದ್ದಾರೆಂದು ಎಂದು ಹೇಳಲಾಗುತ್ತಿದೆ.
ಕಳೆದ ತಿಂಗಳು ರೊಹಿಂಗ್ಯಾ ಉಗ್ರವಾದಿಗಳು ಮ್ಯಾನ್ಮಾರ್ ಪೊಲೀಸ್ ಪೋಸ್ಟ್ ಹಾಗೂ ಸ್ಥಳೀಯ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದ ಹಿನ್ನಲೆಯಲ್ಲಿ, ಸೇನಾ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಭಾರೀ ಹಿಂಸಾಚಾರ ವರದಿಯಾಗಿತ್ತು. ರೊಹಿಂಗ್ಯಾ ಉಗ್ರರ ದಾಳಿ ಭೀತಿಯಿಂದ ರಖೀನೆಯಲ್ಲಿರುವ ಹಿಂದೂ ಮತ್ತು ಬೌದ್ಧರೂ ಕೆಲವೆಡೆ ಸ್ಥಳಾಂತರಗೊಂಡಿದ್ದರು.
ನಾಪತ್ತೆಯಾದವರಲ್ಲಿ 28 ಹಿಂದೂಗಳ ಮೃತದೇಹಗಳಿದ್ದು ಸಾಮೂಹಿಕ ಸಮಾಧಿಯನ್ನು ಸೇನೆಪಡೆಗಳು ಭಾನುವಾರ ಪತ್ತೆ ಹಚ್ಚಿತ್ತು.
ಈ ನಡುವೆ ಬಾಂಗ್ಲಾದೇಶಕ್ಕೆ ವಲಸೆ ಬಂದಿರುವ 4 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಂ ಸಂತ್ರಸ್ತರಿಗಾಗಿ ಭಾರತಿಂದ 620 ಟನ್ ಆಹಾರ ಸಾಮಾಗ್ರಿಗಳನ್ನು ಹಡಗಿನ ಮೂಲಕ ಸಾಗಿಸಲಾಗಿದೆ. ಸಂತ್ರಸ್ತರು ನೆಲೆಯಿರುವ ಪ್ರದೇಶದಲ್ಲಿ ಕಾಲರಾ ರೋಗ ಹರಡುವ ಭೀತಿಯಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics