ರಜನಿಕಾಂತ್ ಮತ್ತು ತಮಿಳು ನಟ ಕಮಲ್ ಹಾಸನ್ (ಸಂಗ್ರಹ ಚಿತ್ರ) 
ದೇಶ

ರಜನಿಕಾಂತ್ ಬಿಜೆಪಿಗೆ ಹೇಳಿ ಮಾಡಿಸಿದ ವ್ಯಕ್ತಿ: ಕಮಲ್ ಹಾಸನ್

ನಾನು ರಾಜಕೀಯ ಸೇರುವುದು ಖಚಿತ. ಯಾವ ಪಕ್ಷ ಸೇರಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಆಧರೆ, ನಾನು ಸೇರುವ ಪಕ್ಷ ಕೇರಿ ಮಾತ್ರ ಆಗಿರುವುದಿಲ್ಲ ಎಂಬ ಹೇಳಿಕೆಯ ಬೆನ್ನಲ್ಲೇ. ಸೂಪರ್ ಸ್ಟಾರ್ ರಜನಿಕಾಂತ್...

ಚೆನ್ನೈ: ನಾನು ರಾಜಕೀಯ ಸೇರುವುದು ಖಚಿತ. ಯಾವ ಪಕ್ಷ ಸೇರಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಆಧರೆ, ನಾನು ಸೇರುವ ಪಕ್ಷ ಕೇರಿ ಮಾತ್ರ ಆಗಿರುವುದಿಲ್ಲ ಎಂಬ ಹೇಳಿಕೆಯ ಬೆನ್ನಲ್ಲೇ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಬಿಜೆಪಿಗೆ ಹೇಳಿ ಮಾಡಿದ ವ್ಯಕ್ತಿಯಾಗಿದ್ದಾರೆಂದು ತಮಿಳು ನಟ ಕಮಲ್ ಹಾಸನ್ ಅವರು ಹೇಳಿದ್ದಾರೆ. 
ಈ ಕುರಿತಂತೆ ಮಾಧ್ಯಮಗಳ ಬಳಿ ಮಾತನಾಡಿರುವ ಅವರು, ರಜನಿಕಾಂತ್ ಅವರು ಬಿಜೆಪಿಗೆ ಹೇಳಿ ಮಾಡಿಸಿದ ವ್ಯಕ್ತಿ. ರಜನಿಕಾಂತ್ ಅವರ ಹಾದಿಯೇ ಬೇರೆ ನನ್ನ ಹಾದಿಯೇ ಬೇರೆ. ನಮ್ಮಿಬ್ಬರ ಹೋಲಿಕೆ ಸಹ್ಯವಲ್ಲ. ನಾನು ವಿಚಾರವಾದಿ. ಆದರೆ, ರಜನಿಕಾಂತ್ ಧಾರ್ಮಿಕ ಶ್ರದ್ಧಾಳು. ಅವರು ಬಿಜೆಪಿಗೆ ಸೂಕ್ತವಾದ ವ್ಯಕ್ತಿಯಾಗಬಹುದು ಎಂದು ಹೇಳಿದ್ದಾರೆ. 

 ಇದೇ ವೇಳೆ ರಾಜಕೀಯಕ್ಕೆ ಸೇರ್ಪಡೆ ಕುರಿತಂತೆ ಸ್ಪಷ್ಟ ಪಡಿಸಿರುವ ಅವರು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದೇನೆಂದು ಹೇಳಿದ್ದಾರೆ. ಅಲ್ಲದೆ,  ಪಕ್ಷ ಸ್ಥಾಪನೆಗೆ ಯಾವುದೇ ನಿರ್ದಿಷ್ಟ ದಿನಾಂಕ ಘೋಷಣೆ ನನ್ನಿಂದ ಅಸಾಧ್ಯ ಎಂದು ತಿಳಿಸಿದ್ದಾರೆ. 


ತಮಿಳುನಾಡಿನಲ್ಲಿ ಅಚ್ಛೇ ದಿನಗಳು ಎಂಬುದು ಮರೀಚಿಕೆ. ಎರಡೂ ದ್ರಾವಿಡ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿವೆ. ನನ್ನ ಹೋರಾಟ ಭ್ರಷ್ಟಾಚಾರದ ವಿರುದ್ಧ. ಹಾಗಾಗಿ, ಮುಂದಿನ ವರ್ಷದೊಳಗೆ ಪರ್ಯಾಯ ಪಕ್ಷ ಸ್ಥಾಪನೆ ಮಾಡುತ್ತೇನೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವವರು ನನ್ನ ಸಂಬಂಧಿಕರು ಅರವಿಂದ ಕೇಜ್ರಿವಾಲ್ ಕೂಡ ನನ್ನ ಸಂಬಂಧಿಕರೇ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್