ಚಂಡೀಗಢ: ದೇಶಾದ್ಯಂತ ವಿಜಯದಶಮಿ ಆಚರಣೆ ಅದ್ಧೂರಿಯಿಂದ ನಡೆದಿದ್ದು, ದುಷ್ಟಶಕ್ತಿಯ ದಮನದ ಸಂಕೇತವಾಗಿ ರಾವಣನ ಪ್ರತಿಕೃತಿಯನ್ನು ದಹಿಸಿ ವಿಜಯ ದಶಮಿಯನ್ನು ಆಚರಿಸಲಾಗಿದೆ.
ಪಂಜಾಬ್ ಹಾಗೂ ಹರ್ಯಾಣದಲ್ಲಿ ವಿಭಿನ್ನ ರೀತಿಯಲ್ಲಿ ದಸರಾ ಆಚರಣೆ ಮಾಡಲಾಗಿದ್ದು, ರಾವಣನ ಪ್ರತಿಕೃತಿಯ ಜೊತೆಗೆ ಸ್ವಯಂ ಘೋಷಿತ ದೇವಮಾನವರ ಪ್ರತಿಕೃತಿಯನ್ನೂ ಸಹ ದಹಿಸಲಾಗಿದೆ. ಗುರ್ಮಿತ್ ರಾಮ್ ರಹೀಂ ಸಿಂಗ್ ನ ಫೋಟೋವನ್ನೂ ಸಹ ದಸರಾ ಆಚರಣೆಯಲ್ಲಿ ದಹಿಸಲಾಗಿದೆ.
ಹರ್ಯಾಣದಲ್ಲಿ 210 ಅಡಿ ಎತ್ತರದ ರಾವಣನ ಪ್ರತಿಕೃತಿಯನ್ನು ದಹಿಸಿ ದಸರಾ ಆಚರಣೆ ಮಾಡಲಾಗಿದ್ದು, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ದಸರಾ ಆಚರಣೆಯಲ್ಲಿ ಭಾಗವಹಿಸಿದ್ದರು.