'ನನ್ನ ಮೆದುಳೇ ನನ್ನ ಶತ್ರು': ಸುದ್ದಿ ವಾಹಿನಿ ನಿರೂಪಕಿ ಆತ್ಮಹತ್ಯೆ
ತೆಲುಗಿನ ಖ್ಯಾತ ಸುದ್ದಿ ವಾಹಿನಿಯ ನಿರೂಪಕಿಯೊಬ್ಬರು ಐದನೇ ಅಂತಸ್ತಿನ ಮಹಡಿ ಮೇಲಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಹೈದರಾಬಾದ್: ತೆಲುಗಿನ ಖ್ಯಾತ ಸುದ್ದಿ ವಾಹಿನಿಯ ನಿರೂಪಕಿಯೊಬ್ಬರು ಐದನೇ ಅಂತಸ್ತಿನ ಮಹಡಿ ಮೇಲಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ತೆಲುಗಿನ ಖ್ಯಾತ ವಿ6 ಸುದ್ದಿ ವಾಹಿನಿಯ ನಿರೂಪಕಿ ವಿ ರಾಧಿಕಾ ರೆಡ್ಡಿ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೂ ಮುನ್ನ ಆಕೆ ಡೆತ್ ನೋಟ್ ಬರೆದಿಟ್ಟಾದ್ದಾರೆ ಎಂದು ತಿಳಿದುಬಂದಿದೆ. ಡೆತ್ ನೋಟ್ ನಲ್ಲಿ ನನ್ನ ಮೆದುಲೇ ನನ್ನ ಶತ್ರು ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತೆಲುಗಿನ ಖ್ಯಾತ ವಿ6 ಸುದ್ದಿವಾಹಿನಿಯ ಪ್ರಮುಖ ನಿರೂಪಕರಾಗಿದ್ದ ರಾಧಿಕಾ ರೆಡ್ಡಿ ಕಳೆದ ಆರು ತಿಂಗಳ ಹಿಂದಷ್ಟೇ ತಮ್ಮ ಪತಿಯಿಂದ ವಿಚ್ಛೇಧನ ಪಡೆದಿದ್ದರಂತೆ. ವಿಚ್ಛೇಧನದ ಬಳಿಕ ತನ್ನ ಬುದ್ಧಿಮಾಂಧ್ಯ 14 ವರ್ಷದ ಪುತ್ರನೊಂದಿಗೆ ತಮ್ಮ ಪೋಷಕರೊಂದಿಗೆ ಹೈದರಾಬಾದ್ ಮೂಸಾಪೇಟ್ ನ ಗೂಡ್ ಶೆಡ್ ರಸ್ತೆಯಲ್ಲಿ ಆಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರಂತೆ.
ನಿನ್ನೆ ರಾತ್ರಿ ಸುಮಾರು 10.40ರಲ್ಲಿ ಕೆಲಸ ಮುಗಿಸಿಕೊಂಡು ಆಪಾರ್ಟ್ ಮೆಂಟ್ ಗೆ ಆಗಮಿಸಿದ ರಾಧಿಕಾ ನೇರವಾಗಿ ಐದನೇ ಮಹಡಿಯತ್ತ ಓಡಿದರಂತೆ. ಇದನ್ನು ಕಂಡ ವಾಚ್ ಮನ್ ಮತ್ತು ಇತರರು ಆಕೆಯನ್ನು ಹಿಂಬಾಲಿಸಿದ್ದು, ಆಕೆ ನೋಡ ನೋಡುತ್ತವೇ ಕೆಳಗೆ ಧುಮುಕಿದ್ದಾರೆ. ಕೂಡಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಧಿಕಾ ಅಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ ಕಳೆದ ಹಲವು ದಿನಗಳಿಂದ ರಾಧಿಕಾ ಖಿನ್ನತೆ ಒಳಗಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.