ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಅನಿಲ್ ಸ್ವರೂಪ್
ನವದೆಹಲಿ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಣ ಕ್ಷೇತ್ರದ ಮೇಲೂ ಮಾಫಿಯಾದ ಕರಿಛಾಯೆ ಬಿದ್ದಿದೆ ಎಂದು ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಅನಿಲ್ ಸ್ವರೂಪ್ ಅವರು ಬಹಿರಂಗಪಡಿಸಲಿದ್ದಾರೆ.
ಖಾಸಗಿ ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿರುವ ಅವರು, ಕಲ್ಲಿದ್ದಲು, ಗಣಿಗಾರಿಕೆ ಭೂಗರ್ಭದಲ್ಲಿ ನಡೆಯುತ್ತದೆ. ಮಾಫಿಯಾ ಎಂಬುದು ಅದಕ್ಕಿಂತಲೂ ದೊಡ್ಡದಾಗಿರುತ್ತದೆ. ಇಂತಹ ಮಾಫಿಯಾ ಹಿಡಿತದಲ್ಲಿ ಇಂದು ಶಿಕ್ಷಣ ಸಿಲುಕಿಕೊಂಡಿದೆ. ಇದರಿಂದ ಶಿಕ್ಷಣ ಕ್ಷೇತ್ರವನ್ನು ಹೊರತರಲು ಯತ್ನ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸ್ವರೂಪ್ ಅವರ ಹೇಳಿಕೆ ಇತ್ತೀಚೆಗಷ್ಟೇ ಸೋರಿಕೆಯಾಗಿದ್ದ ಸಿಬಿಎಸ್ಇ 10ನೇ ತರಗತಿ ಹಾಗೂ 12ನೇ ತರಗತಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲೂ ಮಾಫಿಯಾ ಕೈವಾಡವಿರುವ ಶಂಕೆಗಳನ್ನು ಮೂಡುವಂತೆ ಮಾಡಿದೆ.
ಇದೇ ವೇಳೆ ಸ್ವರೂಪ್ ಅವರು ಸಿಬಿಎಸ್ಇ ಮುಖ್ಯಸ್ಥೆ ಅನಿತಾ ಕರ್ವಾಲ್ ಅವರನ್ನು ಸಮರ್ಥಿಸಿಕೊಂಡಿರುವ ಅವರು, ಪ್ರಕರಣದ ಹಿಂದಿರುವ ಸತ್ಯಾಂಶಗಳನ್ನು ಅರಿಯದೆಯೇ ಜನರು ಅವರನ್ನು ನಿಂದಿಸುತ್ತಿದ್ದಾರೆಂದಿದ್ದಾರೆ.
ಬಳಿಕ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಸಿಬಿಎಸ್ಇ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಅವರು, ಈ ವರೆಗೂ ಈ ರೀತಿಯಾಗಿ ಯಾವುದೇ ರೀತಿಯ ದೂರುಗಳಉ ದಾಖಲಾಗಿಲ್ಲ. ಒಂದು ವೇಳೆ ಕೈವಾಡವಿರುವುದು ಸಾಬೀತಾಗಿದ್ದೇ ಆದರೆ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೈಬರಹದಲ್ಲಿ ಬರೆಯಲಾಗಿದ್ದ 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಮಾರ್ಚ್ 26 ರಂದು ಸೋರಿಕೆಯಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ಮರು ಪರೀಕ್ಷೆಯನ್ನು ಏ.25ರಂದು ನಡೆಸಲಾಗುತ್ತದೆ ಎಂದು ಸಿಬಿಎಸ್ಇ ಹೇಳಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos