ಎನ್ಐಎ ವಾಂಟೆಡ್ ಪಟ್ಟಿಯಲ್ಲಿ ಪಾಕಿಸ್ತಾನ ಮಾಜಿ ರಾಜತಾಂತ್ರಿಕ
ನವದೆಹಲಿ; ರಾಷ್ಟ್ರೀಯ ತನಿಖಾ ದಳ (ಎನ್ಐಎ) ಇದೇ ಮೊದಲ ಬಾರಿಗೆ ವಾಂಟೆಡ್ ಪಟ್ಟಿಯಲ್ಲಿ ಪಾಕಿಸ್ತಾನ ರಾಷ್ಟ್ರದ ಮಾಜಿ ರಾಜತಾಂತ್ರಿಕರೊಬ್ಬರನ್ನು ಸೇರ್ಪಡೆಗೊಳಿಸಿದೆ.
2009-2016ರಲ್ಲಿ ಶ್ರೀಲಂಕಾದಲ್ಲಿ ಪಾಕಿಸ್ತಾನ ರಾಷ್ಟ್ರದ ರಾಜತಾಂತ್ರಿಕರಾಗಿ ಕಾರ್ಯನಿರ್ವಹಿಸಿದ್ದ ಅಮಿರ್ ಝುಬೈರ್ ಸಿದ್ದಿಕಿ ಅವರನ್ನು ರಾಷ್ಟ್ರೀಯ ತನಿಖಾ ದಳ ವಾಂಟೆಡ್ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದು, ಇವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದೆ.
2014ರಲ್ಲಿ ದಕ್ಷಿಣ ಭಾರತದ ಸೇನೆ ಮತ್ತು ನೌಕಾಪಡೆ ಕಮಾಂಡ್ ಗಳ ಪಕ್ಕದಲ್ಲಿರುವ ಅಮೆರಿಕ ಮತ್ತು ಇಸ್ರೇಲ್ ದೂತವಾಸಗಳ ಮೇಲೆ 26/11ರ ಮಾದರಿಯ ಭಯೋತ್ಪಾದಕ ದಾಳಿಗೆ ಸಂಚು ನಡೆಸಿದ್ದ ಇಬ್ಬರು ಪಾಕಿಸ್ತಾನ ಅಧಿಕಾರಿಗಳ ಜೊತೆಗೆ ಸಿದ್ದಿಕಿಯವರ ಹೆಸರನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಸಿದ್ದಿಕಿಯವರನ್ನು ವಾಂಟೆಡ್ ಪಟ್ಟಿಗೆ ಸೇರಿಸಿರುವ ಎನ್ಐಎ ಪಾಕಿಸ್ತಾನ ಅಧಿಕಾರಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಇಂಟರ್ ಪೋಲ್ ಬಳಿ ಮನವಿ ಮಾಡಿಕೊಂಡಿದೆ.