ದೇಶ

ಖ್ಯಾತ ಹಿರಿಯ ಪತ್ರಕರ್ತ ಎಸ್ ನಿಹಾಲ್ ಸಿಂಗ್ ನಿಧನ

Srinivasamurthy VN
ನವದೆಹಲಿ: ಖ್ಯಾತ ಹಿರಿಯ ಪತ್ರಕರ್ತ ಎಸ್ ನಿಹಾಲ್ ಸಿಂಗ್ ಅವರು ಸೋಮವಾರ ನಿಧನರಾಗಿದ್ದು, ಅವರಿಗೆ 89 ವರ್ಷ ವಯಸ್ಸಾಗಿತ್ತು.
ದೆಹಲಿಯ ನ್ಯಾಷನಲ್ ಹಾರ್ಟ್ ಇನ್ಸ್ಟಿಟ್ಯೂಟ್ ನಲ್ಲಿ  ನಿಹಾಲ್ ಸಿಂಗ್ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದ್ದು, ನಿಹಾಲ್ ಸಿಂಗ್ ಅವರು ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಇತ್ತೀಚೆಗಷ್ಟೇ ದೆಹಲಿಯ ನ್ಯಾಷನಲ್ ಹಾರ್ಟ್ ಇನ್ಸ್ಟಿಟ್ಯೂಟ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ಸಹೋದರನ ಪತ್ನಿ ಇಂದು ನಿಹಾಲ್ ಸಿಂಗ್ ಹೇಳಿದ್ದಾರೆ.
ನಾಳೆ ದೆಹಲಿಯ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ದ ಇಂಡಿಯನ್ ಎಕ್ಸ್ ಪ್ರೆಸ್, ದಿ ಸ್ಟೇಟ್ಸ್ ಮನ್ ಮತ್ತು ಖಲೀಜ್ ಟೈಮ್ಸ್, ಏಷ್ಯನ್ ನ್ಯೂಸ್ ಇಂಟರ್ ನ್ಯಾಷನಲ್ ಸಂಸ್ಥೆಗಳಲ್ಲಿ ನಿಹಾಲ್ ಸಿಂಗ್  ಕರ್ತವ್ಯ ನಿರ್ವಹಿಸಿದ್ದರು.
SCROLL FOR NEXT