ನವದೆಹಲಿ : ವೇತನ ಪಡೆಯುವ ತೆರಿಗೆದಾರರಿಗಾಗಿ ಇತ್ತೀಚಿಗೆ ವಿನೂತನ ಐಟಿ ರಿಟರ್ನ್-1 ಫಾರ್ಮ್ ನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಆದಾಯ ತೆರಿಗೆ ಇಲಾಖೆಯ ಅಧಿಕೃತ ಪೋರ್ಟಲ್ ನಲ್ಲಿ ಇಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಏಪ್ರಿಲ್.5 ರಂದು ಸಿಬಿಡಿಟಿಯಿಂದ ಏಕ ಆದಾಯ ತೆರಿಗೆ ಫಾರ್ಮ್ ನ್ನು ಸಿದ್ಧಪಡಿಸಲಾಗಿದ್ದು, ವೆಬ್ ಸೈಟ್. https://www.incometaxindiaefiling.gov.in ನಲ್ಲಿ ನಿನ್ನೆ ಇಡಲಾಗಿದೆ .ಮತ್ತೊಂದು ಐಟಿ ರಿಟರ್ನ್ಸ್ ಫಾರ್ಮ್ಸ್ ಶೀಘ್ರದಲ್ಲಿಯೇ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.
2019-19ರ ಆರ್ಥಿಕ ವರ್ಷದಲ್ಲಿ ವೇತನದಾರರ ವೇತನ ಕಡಿತ, ಆದಾಯ, ಮತ್ತು ವ್ಯಾಪಾರಿಗಳಿಗೆ ಜಿಎಸ್ ಟಿ ನಂಬರ್ ಒದಗಿಸಲು ಹೊಸ ಐಟಿ ಫಾರ್ಮ್ಸ್ ಕಡ್ಡಾಯಗೊಳಿಸಲಾಗಿದೆ.
ವಿನೂತನ ಐಟಿ ರಿಟರ್ನ್-1 ಫಾರ್ಮ್ ನಲ್ಲಿ ವಿವೇಚನಾಶೀಲತೆಯಿಂದ ಕೆಲವೊಂದು ಕ್ಷೇತ್ರಗಳನ್ನು ಇಡಲಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಫೈಲಿಂಗ್ ನಲ್ಲಿ ಅಂತಹ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕೆಲ ತೆರಿಗೆದಾರರನ್ನು ಹೊರತುಪಡಿಸಿದರೆ ಎಲ್ಲಾ ಏಳು ಐಟಿ ರಿಟರ್ನ್ ಫಾರ್ಮ್ಸ್ ವಿದ್ಯುನ್ಮಾನವಾಗಿಯೇ ತುಂಬಬೇಕಾಗುತ್ತದೆ. ಐಟಿ ರಿಟರ್ನ್-1 ಅಥವಾ ಸಹಜ್ ಅನ್ನು ವೇತನದಾರ ತೆರಿಗೆದಾರರು ಮಾತ್ರ ಫೈಲಿಂಗ್ ಮಾಡಬೇಕಾಗುತ್ತದೆ.
ವೇತನದಾರರ ವೇತನ ಕಡಿತ ಹಿಂಪಡೆಯುವಿಕೆ, ವಿನಾಯಿತ ಸಂಬಂಧ ಪ್ರತ್ಯೇಕ ವಲಯದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. ಫಾರ್ಮ್ 16 ಬಗ್ಗೆಯೂ ಮಾಹಿತಿ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
50 ಲಕ್ಷ ರೂ.ವರೆಗೂ ಆದಾಯ ಹೊಂದಿರುವ ನಾಗರಿಕರು ಐಟಿ ರಿಟರ್ನ್-1 ಫಾರ್ಮ್ ಫೈಲಿಂಗ್ ಮಾಡಬಹುದೆಂದು ಸಿಬಿಡಿಟಿ ಹೇಳಿದೆ. ಮನೆ, ಆಸ್ತಿಯಿಂದ ಬರುವ ಆದಾಯವನ್ನು ಕಡ್ಡಾಯಗೊಳಿಸಲಾಗಿದ್ದು, ಫಾರ್ಮ್ಸ್ 16 ನಲ್ಲಿ ವೇತನ ಹಾಗೂ ಮನೆ ಆಸ್ತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ.ಆದಾಯ ತೆರಿಗೆ ಪಾವತಿಸಲು ಜುಲೈ 31 ಕೊನೆಯ ದಿನವಾಗಿದೆ.