ಸಂಗ್ರಹ ಚಿತ್ರ 
ದೇಶ

ದಿಢೀರ್ ಸ್ಥಗಿತಗೊಂಡ ಸುಪ್ರೀಂ ಕೋರ್ಟ್ ವೆಬ್ ಸೈಟ್, ಹ್ಯಾಕರ್ ಗಳ ದಾಳಿ ಶಂಕೆ!

ದೇಶದ ಸರ್ವೋಚ್ಛ ನ್ಯಾಯಾಲಯದ ಅಧಿಕೃತ ವೆಬ್ ಸೈಟ್ ದಿಢೀರ್ ಸ್ಥಗಿತಗೊಂಡಿದ್ದು, ವೆಬ್ ಸೈಟ್ ಮೇಲ್ ಹ್ಯಾಕರ್ ಗಳು ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ.

ನವದೆಹಲಿ: ದೇಶದ ಸರ್ವೋಚ್ಛ ನ್ಯಾಯಾಲಯದ ಅಧಿಕೃತ ವೆಬ್ ಸೈಟ್ ದಿಢೀರ್ ಸ್ಥಗಿತಗೊಂಡಿದ್ದು, ವೆಬ್ ಸೈಟ್ ಮೇಲ್ ಹ್ಯಾಕರ್ ಗಳು ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಇಂದು  ಬೆಳಗ್ಗೆ ಸುಮಾರು 11.35ರ ಸುಮಾರಿನಲ್ಲಿ ವೆಬ್ ಸೈಟ್ ತನ್ನ ಕಾರ್ಯ ಸ್ಥಗಿತಗೊಳಿಸಿದ್ದು, ವೆಬ್ ಸೈಟ್ ಹ್ಯಾಕ್ ಆದ ಕುರಿತು ಈ ವರೆಗೂ ಯಾವುದೇ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಇನ್ನು ವೆಬ್ ಸೈಟಿನ ಮುಖಪುಟ ತೆರೆದರೆ ಹೈಟೆಕ್ ಬ್ರೆಜಿಲ್ ಹ್ಯಾಕ್ ಟೀಮ್ ಹ್ಯಾಕ್ (hackeado por HighTech Brazil HackTeam) ಎಂಬ ಬರಹ ಕಾಣುತ್ತಿದ್ದು, ಬ್ರೆಜಿಲ್ ಮೂಲದ ಹ್ಯಾಕರ್ ಗಳು ವೆಬ್ ಸೈಟ್ ಹ್ಯಾಕ್ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. 
ಇನ್ನು ಕೂಡಲೇ ಎಚ್ಚೆತ್ತಿರುವ ಅಧಿಕಾರಿಗಳು ವೆಬ್ ಸೈಟ್ ಅನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದು, ವೆಬ್ ಸೈಟ್ ಸರಿಪಡಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. 
ಪ್ರಸ್ತುತ ವೆಬ್ ಸೈಟ್ ನ ಕಾರ್ಯಾಚರಣೆ ಆರಂಭಿಸಿದ್ದು, ಇದಕ್ಕೂ ಮೊದಲು ವೆಬ್ ಸೈಟ್ ಪುಟ ತೆರೆದರೆ, site under maintenance, (ಸೈಟ್ ದುರಸ್ತಿಯಲ್ಲಿದೆ) ಎಂಬ ಸಂದೇಶ ಕಾಣುತ್ತಿದೆ.  ಆದರೆ ಈ ವರೆಗೂ ಅಧಿಕಾರಿಗಳು ಮಾತ್ರ ವೆಬ್ ಸೈಟ್ ಹ್ಯಾಕ್ ಆಗಿರುವ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!