ದೇಶ

ಭಯೋತ್ಪಾದಕರಿಗೆ ಆರ್ಥಿಕ ನೆರವು: ಹಿಜ್ಬುಲ್ ಮುಖ್ಯಸ್ಥನ ಮಗನ ವಿರುದ್ಧ ಎನ್ಐಎ ಚಾರ್ಜ್ ಶೀಟ್

Srinivas Rao BV
ಶ್ರೀನಗರ: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯೀದ್ ಸಲಾಹುದ್ದೀನ್ ಮಗ ಸಯೀದ್ ಶಾಹಿದ್ ಯೂಸೂಫ್ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ. 
ಚಾರ್ಜ್ ಶೀಟ್ ಸ್ವೀಕರಿಸಿರುವ ಜಿಲ್ಲಾ ನ್ಯಾಯಾಧೀಶರಾದ ಪೂನಮ್ ಬಾಂಬಾ ವಿಚಾರಣೆಯನ್ನು ಮೇ.4 ಕ್ಕೆ ಮುಂದೂಡಿದೆ. ಕಾಶ್ಮೀರದ ಬಡ್ಗಮ್ ಕೃಷಿ ಸಹಾಯಕನಾಗಿದ್ದ 42 ವರ್ಷದ ಯುಸೂಫ್ ನನ್ನು ಎನ್ಐಎ ಕಳೆದ ವರ್ಷ ಬಂಧಿಸಿತ್ತು.  ಮಾ.7 ರಂದು ಯೂಸೂಫ್ ನ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. 
ನಿಷೇಧಿತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯೊಂದಿಗೆ ಆರೋಪಿ ಸಂಪರ್ಕ ಹೊಂದಿದ್ದಾನೆ ಎಂದು ಎನ್ಐಎ ವಾದಿಸಿದೆ. 
SCROLL FOR NEXT