ಲಖನೌ: ದೇಶಾದ್ಯಂತ ಭಾರಿ ಸುದ್ದಿಗೆ ಗುರಿಯಾಗಿರುವ ಉತ್ತರ ಪ್ರದೇಶದ ಉನ್ನಾವ್ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಸಿಬಿಐ ಬಂಧನ ಅವಧಿಯನ್ನು ಏಪ್ರಿಲ್ 27ರವೆರೆಗೂ ವಿಸ್ತರಣೆ ಮಾಡಲಾಗಿದೆ.
ಉತ್ತರ ಪ್ರದೇಶದ ಸ್ಥಳೀಯ ಕೋರ್ಟ್ ಆರೋಪಿ ಶಾಸಕರನ್ನು ಮತ್ತೆ ಏಪ್ರಿಲ್ 27ರವರೆಗೂ ಸಿಬಿಐ ಅಧಿಕಾರಿಗಳ ವಶಕ್ಕೆ ನೀಡಿದೆ. ಪ್ರಕರಣ ಸಂಬಂಧ ಇಂದು ಸಿಬಿಐ ಅಧಿಕಾರಿಗಳು ಆರೋಪಿ ಶಾಸಕ ಸೆಂಗಾರ್ ನನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿದರು. ಈ ವೇಳೆ ಪರ-ವಿರೋಧಿ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ಆಶುತೋಷ್ ಕುಮಾರ್ ಅವರು ಸೆಂಗಾರ್ ಅವರ ಸಿಬಿಐ ಬಂಧನ ಅವಧಿಯನ್ನು ಏಪ್ರಿಲ್ 27ರವರೆಗೂ ವಿಸ್ತರಣೆ ಮಾಡಿದರು.
ಈ ವೇಳೆ ಸರ್ಕಾರಿ ವಿಶೇಷ ಅಭಿಯೋಜಕರಾದ ಚಂದ್ರಿಕಾ ಪ್ರಸಾದ್ ಬಜಪಾಲ್ ಕೂಡ ಇದ್ದರು.