ದೇಶ

ನೋಟು ಕೊರತೆ: ರಾಜ್ಯದಲ್ಲಿ ಜಪ್ತಿ ಮಾಡಲಾದ ನಗದು ಹಣದಲ್ಲಿ ಶೇ.97ರಷ್ಟು ಹೆಚ್ಚಿನ ಮುಖಬೆಲೆ ನೋಟುಗಳು; ತೆರಿಗೆ ಇಲಾಖೆ

Vishwanath S
ನವದೆಹಲಿ: ಚುನಾವಣೆ ಹೊಸ್ತಿಲಿನಲ್ಲಿರುವ ಕರ್ನಾಟಕದಲ್ಲಿ ಜಪ್ತಿ ಮಾಡಲಾದ ನಗದು ಹಣದಲ್ಲಿ ಶೇ.97ರಷ್ಟು ಹೆಚ್ಚಿನವು 2 ಸಾವಿರ ಮತ್ತು 500 ರುಪಾಯಿ ನೋಟುಗಳಾಗಿದ್ದು ನೋಟು ಕೊರತೆಗೆ ಇದೇ ಕಾರಣ ಎಂದ  ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 
ಕೆಲ ದಿನಗಳಿಂದ ದೇಶದ ಕೆಲ ರಾಜ್ಯಗಳಲ್ಲಿ ನಗದು ಕೊರತೆ ಎದುರಾಗಿದ್ದು ಎಲ್ಲಾ ಎಟಿಎಂಗಳಲ್ಲಿ ನೋ ಕ್ಯಾಷ್ ಬೋರ್ಡ್ ಹಾಕಲಾಗಿತ್ತು. ಇನ್ನು ಮೇ 12ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಪ್ತಿ ಮಾಡಲಾದ 4.13 ಕೋಟಿ ರುಪಾಯಿ ನೋಟು ನಿಷೇದದ ನಂತರ ಚಲಾವಣೆಗೆ ಬಂದ 2 ಸಾವಿರ ಹಾಗೂ 500 ಮುಖ ಬೆಲೆಯ ನೋಟುಗಳು ಎಂದು ತೆರಿಗೆ ಇಲಾಖೆ ಹೇಳಿದೆ. 
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 4.13 ಕೋಟಿ ರುಪಾಯಿ ಮತ್ತು 1.32 ಕೋಟಿ ಮೌಲ್ಯದ 4,52 ಕಿಲೋ ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಆತಂಕದ ವಿಷಯವೆಂದರೂ ವಶಪಡಿಸಿಕೊಂಡಿರುವ ನಗದಿನಲ್ಲಿ ಶೇಖಡ 97ರಷ್ಟು ನೋಟುಗಳು ನೋಟು ನಿಷೇಧದ ನಂತರ ಚಲಾವಣೆಗೆ ಬಂದ ಹೊಸ ನೋಟುಗಳಾಗಿವೆ.
SCROLL FOR NEXT