ಏರ್ ಇಂಡಿಯಾ ವಿಮಾನದಲ್ಲಿ ಕಳಚಿ ಬಿದ್ದ ಕಿಟಕಿ; ಮೂವರಿಗೆ ಗಾಯ 
ದೇಶ

ಏರ್ ಇಂಡಿಯಾ ವಿಮಾನದಲ್ಲಿ ಕಳಚಿ ಬಿದ್ದ ಕಿಟಕಿ; ಮೂವರಿಗೆ ಗಾಯ

ಪಂಜಾಬ್ ರಾಜ್ಯದ ಅಮೃತಸರದಿಂದ ರಾಜಧಾನಿ ದೆಹಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನದ ಕಿಟಕಿಯ ಒಳಭಾಗ ಕಳಚಿ ಬಿದ್ದ ಪರಿಣಾಮ, ಮೂವರು ವಿಮಾನಯಾನಿಗಳಿಗೆ ಗಾಯವಾಗಿರುವ ಘಟನೆ ಶನಿವಾರ ನಡೆದಿದೆ...

ನವದೆಹಲಿ; ಪಂಜಾಬ್ ರಾಜ್ಯದ ಅಮೃತಸರದಿಂದ ರಾಜಧಾನಿ ದೆಹಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನದ ಕಿಟಕಿಯ ಒಳಭಾಗ ಕಳಚಿ ಬಿದ್ದ ಪರಿಣಾಮ, ಮೂವರು ವಿಮಾನಯಾನಿಗಳಿಗೆ ಗಾಯವಾಗಿರುವ ಘಟನೆ ಶನಿವಾರ ನಡೆದಿದೆ. 
ಬೋಯಿಂಗ್ 787 (ಎಐ 462) ಡ್ರೀಮ್'ಲೈನರ್ ನಲ್ಲಿ ಘಟನೆ ನಡೆದಿದ್ದು, 10-15 ನಿಮಿಷಗಳ ವಿಮಾನ ನಿಯಂತ್ರಣಾಧಿಕಾರಿಗಳು ಹಾಗೂ ವಿಮಾನಯಾನಿಗಳು ಭೀತಿಗೊಳಲಾಗಿದ್ದರು ಎಂದು ತಿಳಿದುಬಂದಿದೆ. 
ಘಟನೆಯಲ್ಲಿ ಮೂವರು ವಿಮಾನಯಾನಿಗಳಿಗೆ ಗಾಯಗಳಾಗಿದ್ದು, ಪ್ರಯಾಣಿಕರ ಆಸನದ ಮೇಲೆ ಅಳವಡಿಲಾಗಿದ್ದ ಆಮ್ಲಜನಕದ ಮಾಸ್ಕ್ ಗಳೂ ಕೂಡ ಚೆಲ್ಲಾಪಿಲ್ಲಿಯಾಗಿದ್ದವು ಎಂದು ವರದಿಗಳು ತಿಳಿಸಿವೆ.
ಅಮೃತಸರ-ದೆಹಲಿಯ ವಿಮಾನಯಾನ 35 ನಿಮಿಷಗಳಿದ್ದವು. ವಿಮಾನದಲ್ಲಿ 240 ಪ್ರಯಾಣಿರಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. 
ವಿಮಾನದ ಕಿಟಕಿ ಕಳಚಿ ಬಿದ್ದಿರುವ ಘಟನೆಯ 50 ಸೆಕೆಂಡ್ ಗಳ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ. 
ಇದೇ ರೀತಿಯ ಘಟನೆ 2014ರ ಅಕ್ಟೋಬರ್ ತಿಂಗಳಿನಲ್ಲಿಯೂ ನಡೆದಿದ್ದು, ಸಿಂಗಾಪುರ ಏರ್'ಲೈನ್ಸ್ ಎ-380 ವಿಮಾನ ಮುಂಬೈನಲ್ಲಿ ಇಳಿಯುವ ಹಂತದಲ್ಲಿದ್ದಾಗ ಅವಘಡ ಸಂಭವಿಸಿತ್ತು. ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT