ದೇಶ

ಜಿಎಸ್ ಟಿ, ನೋಟು ರದ್ಧತಿಯಿಂದ 1.8 ದಶಲಕ್ಷಕ್ಕೂ ಹೆಚ್ಚು ಜನ ಐಟಿ ಬಲೆಗೆ: ಭಾರತ

Nagaraja AB

ನವದೆಹಲಿ: ನೂತನ ಸರಕು ಮತ್ತು ಸೇವಾ ತೆರಿಗೆ- ಜಿಎಸ್ ಟಿ ಹಾಗೂ ಅಧಿಕ ಮೌಲ್ಯದ ನೋಟು ರದ್ದತಿ ಅನುಷ್ಠಾನದಿಂದಾಗಿ 1.8 ಮಿಲಿಯನ್ ಗೂ ಅಧಿಕ ಜನರು ಆದಾಯ ತೆರಿಗೆ ವ್ಯಾಪ್ತಿಗೊಳಪಟ್ಟಿದ್ದಾರೆ ಎಂದು ಭಾರತ ವಿಶ್ವಸಂಸ್ಥೆಗೆ ತಿಳಿಸಿದೆ.

ಹಣಕಾಸು ಅಭಿವೃದ್ಧಿ ಕುರಿತ ECOSOC ಶೃಂಗಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎ. ಗಿತೇಶ್ ಶರ್ಮಾ, ಭಾರತ ಪ್ರಸ್ತುತ ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಡಿಜಿಟಲ್ ನಗದು ವ್ಯವಹಾರ ಪ್ರೋತ್ಸಾಹದೊಂದಿಗೆ ಏಕರೂಪದ ತೆರಿಗೆ ಪದ್ಧತಿ ಜಿಎಸ್ ಟಿಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

 ಇಂತಹ ಆರ್ಥಿಕ ಸುಧಾರಣೆ ಕ್ರಮಗಳಿಂದಾಗಿ  ಪರೋಕ್ಷ ತೆರಿಗೆದಾರರ ಸಂಖ್ಯೆಯಲ್ಲಿ ಶೇ. 50 ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ,.

SCROLL FOR NEXT