ದೇಶ

ಉಜ್ಬೇಕಿಸ್ತಾನಿಯರಲ್ಲಿ ಭಾರತೀಯ ಸಂಸ್ಕೃತಿ ಮೇಲೆ ಅಪಾರ ಪ್ರೀತಿ, ಗೌರವವಿದೆ; ಸುಷ್ಮಾ ಸ್ವರಾಜ್

Sumana Upadhyaya

ತಾಷ್ಕೆಂಟ್(ಉಜ್ಬೇಕಿಸ್ತಾನ): ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ಸಿಗುತ್ತಿರುವ ಪ್ರೀತಿ, ಗೌರವಗಳನ್ನು ಉಜ್ಬೇಕಿಸ್ತಾನದಲ್ಲಿ ಪ್ರತಿಯೊಂದು ಕಡೆ ನೋಡಬಹುದು ಎಂದು ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಉಜ್ಬೇಕಿಸ್ತಾನದಲ್ಲಿರುವ ಭಾರತೀಯರು, ಹಿಂದಿ ಶಿಕ್ಷಕರು ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಮತ್ತು ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮಗಳ ಸದಸ್ಯರ ಜೊತೆ ಸಂವಾದ ನಡೆಸಿದ ಸುಷ್ಮಾ ಸ್ವರಾಜ್, ಇಲ್ಲಿ ಮೂರು ವಿಧದ ಜನರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದ್ದು ನನಗೆ ಸಂತೋಷವಾಗಿದೆ. ಇಂದು ನಾನು ಭಾರತಕ್ಕೆ ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳು, ಹಿಂದಿ ಶಿಕ್ಷಕರು ಮತ್ತು ಉಜ್ಭೇಕಿಸ್ತಾನದ ಶಿಕ್ಷಣ ತಜ್ಞರನ್ನು ಭೇಟಿ ಮಾಡಿರುವುದು ತೀವ್ರ ಸಂತಸ ತಂದಿದೆ ಎಂದರು.

25 ವರ್ಷಗಳ ಹಿಂದೆ ಭಾರತ ಮತ್ತು ಉಜ್ಬೇಕಿಸ್ತಾನಗಳು ರಾಯಭಾರಿ ಸಂಬಂಧವನ್ನು ಹೊಂದಿದ್ದರೂ ಕೂಡ ಐತಿಹಾಸಿಕ ಮತ್ತು ಸಾಂಸ್ಕೃತಿಕ ಬಾಂಧವ್ಯದ ಹಿನ್ನಲೆಯಲ್ಲಿ ಗಟ್ಟಿಯಾಗಿದೆ ಎಂದರು.

ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ಎಲ್ಲಾ ಸರ್ಕಾರಗಳು ಸೋವಿಯತ್ ಒಕ್ಕೂಟದ ನಂತರ ಉತ್ತಮ ಬಾಂಧವ್ಯವನ್ನು ಹೊಂದಿದೆ. ನಮ್ಮ ಹಿಂದಿ ಭಾಷೆಯ ಮೇಲಿನ ಪ್ರೀತಿ ಮತ್ತು ಶಾಸ್ತ್ರೀಯ ನೃತ್ಯಗಳ ಮೇಲೆ ರಷ್ಯಾ, ಉಜ್ಬೇಕಿಸ್ತಾನ ಮತ್ತು ಇತರ ಹಲವು ದೇಶಗಳ ಜನರಿಗೆ ತೀವ್ರ ಒಲವು ಇದೆ. ಭಾರತ-ರಷ್ಯಾ ಮತ್ತು ಇತರ ಕೇಂದ್ರ ಏಷ್ಯಾ ರಾಷ್ಟ್ರಗಳಲ್ಲಿ ಕಾಣುತ್ತದೆ ಎಂದರು.

SCROLL FOR NEXT