ಮೊರಾದಾಬಾದ್: ಆರೋಗ್ಯಯುತ ಮಗುವನ್ನು ಪಡೆಯುವ ಉದ್ದೇಶದಿಂದ ದಂಪತಿಗಳು ತಮ್ಮ ಆರು ವರ್ಷದ ಮಗಳನ್ನು ಕೊಂದು ಮನೆಯಲ್ಲಿ ಹೂತು ಹಾಕಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೊರದಬಾದ್ ನಲ್ಲಿ ನಡೆದಿದೆ.
ಆರು ವರ್ಷದ ಬಾಲಕಿ ಅಪೌಷ್ಟಿತೆ ಹಾಗೂ ರಿಕೆಟ್ಸ್ ಕಾಯಿಲೆಯಿಂದ ಬಳಲುತ್ತಿದ್ದಳು. ಅವಳಿಗೆ ಹಲವು ವರ್ಷಗಳಿಂದಲೂ ಚಿಕಿತ್ಸೆ ಕೊಡಿಸಿದರೂ ಆಕೆ ಗುಣಮುಖವಾಗಿರಲಿಲ್ಲ ಇದರಿಂದಾಗಿ ಮಂತ್ರವಾದಿಯ ಬಳಿ ಸಲಹೆ ದಂಪತಿಗಳು ತೆರಳಿದ್ದರು. ಆತ ಬದುಕಿರುವ ಮಗಳನ್ನು ಕೊಂದು ಮನೆಯಲ್ಲಿಯೇ ಹೂತು ಹಾಕಿದರೆ, ಮುಂದೆ ಆರೋಗ್ಯಯುತ ಮಗು ಹುಟ್ಟುತ್ತದೆ ಎಂದು ಸಲಹೆ ನೀಡಿದರು.
ಮಂತ್ರವಾದಿಯ ಈ ಸಲಹೆ ಕೇಳಿ ದಂಪತಿಗಳು ತಮ್ಮ ಮಗಳನ್ನು ಉಸಿರುಗಟ್ಟಿಸಿಕೊಂದಿದ್ದಾರೆ. ಮನೆಯಲ್ಲಿ ಅಗೆಯುತ್ತಿದ್ದ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಮೃತ ಬಾಲಕಿಯ ನೆರೆಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಬಾಲಕಿ ದೇಹ ಪತ್ತೆಯಾಗಿದ್ದು ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆಕೆಯನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ಮರಣೋತ್ತರ ವರದಿ ತಿಳಿಸಿದೆ.
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಮೃತ ಬಾಲಕಿ ಅಜ್ಜಿ. ಈ ಕೃತ್ಯದಲ್ಲಿ ಮೃತ ಬಾಲಕಿ ತಾರಾ ಅಮ್ಮ ಭಾಗಿಯಾಗಿರಲಿಲ್ಲ. ಅಜ್ಜಿಯೇ ಈ ಎಲ್ಲಾ ಕೃತ್ಯವನ್ನು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಯಾವುದೇ ಔಷಧಿ ನೀಡಿದರೂ ಬಾಲಕಿ ಚೇತರಿಸಿಕೊಳ್ಳದೇ ಮತ್ತಷ್ಟು ಬಲಹೀನಳಾಗುತ್ತಿದ್ದಳು ಎದು ಆಕೆಯ ಅಜ್ಜಿ ತಿಳಿಸಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics