ದೇಶ

ಕರುಣಾನಿಧಿ ವಿಧಿವಶ : ನಾಳೆ ಏನು ನಡೆಯುತ್ತದೆ

Nagaraja AB

ಚನ್ನೈ : ಕರುಣಾನಿಧಿ  ಪಾರ್ಥಿವ ಶರೀರವನ್ನು ಗೋಪಾಲಪುರಂ ನಿವಾಸಕ್ಕೆ ಕೊಂಡೊಯ್ದು  ರಾತ್ರಿ 8-30 ರಿಂದ  ಬೆಳಗ್ಗೆ 1 ಗಂಟೆಯವರೆಗೂ ಅಲ್ಲಿ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ನಂತರ ಬೆಳಗ್ಗೆ   ಸಿಐಟಿ ಕಾಲೋನಿಯಲ್ಲಿರುವ  ಕರುಣಾನಿಧಿ ಪುತ್ರಿ ಕನ್ನಿಮೋಳಿ ಅವರ ನಿವಾಸಕ್ಕೆ ಪಾರ್ಥಿವ ಶರೀರ ಕೊಂಡೊಯ್ದು  ಬೆಳಗ್ಗೆ 1  ಗಂಟೆಯಿಂದ  3 ಗಂಟೆಯವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

 ನಂತರ 4 ಗಂಟೆಗೆ  ಪಾರ್ಥಿವ ಶರೀರವನ್ನು ರಾಜಾಜಿ ಹಾಲ್ ಗೆ ತಂದು ರಾಜಕೀಯ ನಾಯಕರು, ಪಕ್ಷದ ಕಾರ್ಯಕರ್ತರು ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ. 

SCROLL FOR NEXT