ದಲಿತರಿಗೆ ಮೋದಿ ಹೃದಯದಲ್ಲಿ ಜಾಗವಿದ್ದಿದ್ದರೆ, ದಲಿತರ ಕುರಿತ ನೀತಿಗಳೇ ಬೇರೆ ಇರುತ್ತಿತ್ತು: ರಾಹುಲ್ ಗಾಂಧಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೃದಯದಲ್ಲಿ ದಲಿತರಿಗೆ ಜಾಗವಿದ್ದಿದ್ದರೆ, ದಲಿತರ ಕುರಿತ ನೀತಿಗಳೇ ಬೇರೆ ಇರುತ್ತಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ...
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೃದಯದಲ್ಲಿ ದಲಿತರಿಗೆ ಜಾಗವಿದ್ದಿದ್ದರೆ, ದಲಿತರ ಕುರಿತ ನೀತಿಗಳೇ ಬೇರೆ ಇರುತ್ತಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ.
ಪರಿಶಿಷ್ಚ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್'ಸಿ/ಎಸ್'ಟಿ) ದೌರ್ಜನ್ಯ ಕಾಯ್ದೆ ವಿರುದ್ಧ ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಮಾತನಾಡಿರುವ ರಾಹುಲ್ ಗಾಂಧಿಯವರು ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ದಲಿತರಿಗೆ ಮೋದಿಯವರ ಹೃದಯದಲ್ಲಿ ಜಾಗವಿದ್ದಿದ್ದರೆ, ದಲಿತರ ಕುರಿತ ನೀತಿಗಳೇ ಬೇರೆ ಇರುತ್ತಿದ್ದವು. ಮುಖ್ಯಮಂತ್ರಿಯಾಗಿದ್ದ ಮೋದಿಯವರು, ದಲಿತೊಂಕೋ ಸಫಾಯ್ ಕರ್ನೇ ಸೆ ಆನಂದ್ ಮಿಲ್ತಾ ಹೈ (ದಲಿತರನ್ನು ಶುದ್ಧಿ ಮಾಡುವುದರಿಂದ ಆನಂದ ಸಿಗುತ್ತದೆ) ಎಂದು ತಮ್ಮ ಪುಸ್ತಕದಲ್ಲಿ ಬರೆದಿದ್ದರು. ಅವರ ಅವರ ಸಿದ್ಧಾಂತ ಎಂದು ಹೇಳಿದ್ದಾರೆ.
ಇದೇ ವೇಳೆ ರೋಹಿಲ್ ವೆಮುಲಾ ಪ್ರಕರಣವನ್ನು ಸ್ಮರಿಸಿರುವ ರಾಹುಲ್, 2 ವರ್ಷಗಳ ಹಿಂದೆ ಜಾತಿ ತಾರತಮ್ಯದಿಂದಾಗಿ ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಮೋದಿ ಆಲೋಚನೆ ದಲಿತ ವಿರೋಧಿಯಾಗಿದೆ. 2019ರಲ್ಲಿ ಅದನ್ನು ನಾವು ಸೋಲಿಸುತ್ತೇವೆ. ಕಾಂಗ್ರೆಸ್ ಸದಾ ಕಾಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆಯನ್ನು ರಕ್ಷಣೆ ಮಾಡಿಕೊಂಡು ಬಂದಿದೆ ಎಂದು ತಿಳಿಸಿದ್ದಾರೆ.