ಇಂಡೋನೇಷ್ಯಾಗೆ ಹೋಗುವುದು ಸುರಕ್ಷಿತವೇ?-ವ್ಯಕ್ತಿಯ ಪ್ರಶ್ನೆ, ಜ್ವಾಲಾಮುಖಿಯನ್ನೇ ಕೇಳಿನೋಡುತ್ತೇನೆ-ಸುಷ್ಮಾ ಸ್ವರಾಜ್ ಪ್ರತಿಕ್ರಿಯೆ
ಟ್ವಿಟರ್ ನಲ್ಲಿ ತಮ್ಮನ್ನು ಕೇಳುವ ಪ್ರಶ್ನೆಗಳಿಗೆ ನೀಡುವ ಖಡಕ್ ಉತ್ತರಗಳಿಗೆ ಖ್ಯಾತಿ ಪಡೆದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಟ್ವಿಟರ್ ನಲ್ಲಿ ತಮ್ಮನ್ನು ಕೇಳುವ ಪ್ರಶ್ನೆಗಳಿಗೆ ನೀಡುವ ಖಡಕ್ ಉತ್ತರಗಳಿಗೆ ಖ್ಯಾತಿ ಪಡೆದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಇಂಡೋನೇಷ್ಯಾದ ಬಾಲಿಗೆ ಪ್ರವಾಸಕ್ಕೆ ತೆರಳಬೇಕೆಂದುಕೊಂಡಿದ್ದ ವ್ಯಕ್ತಿಯೊಬ್ಬರು, ಇಂಡೋನೇಷ್ಯಾದ ಬಾಲಿಗೆ ತೆರಳುವುದು ಸುರಕ್ಷಿತವೇ ಎಂದು ಸುಷ್ಮಾ ಸ್ವರಾಜ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸುಷ್ಮಾ ಸ್ವರಾಜ್ ಅಲ್ಲಿರುವ ಜ್ವಾಲಾಮುಖಿಯನ್ನೇ ಕೇಳಿ ನೋಡುತೇನೆ ಎಂದು ಉತ್ತರಿಸಿದ್ದಾರೆ.
ಸುಷ್ಮಾ ಸ್ವರಾಜ್ ಅವರ ಈ ಉತ್ತರವನ್ನು ಟ್ವಿಟರ್ ನಲ್ಲಿ 11 ಸಾವಿರ ಮಂದಿ ಲೈಕ್ ಮಾಡಿದ್ದು, 2 ಸಾವಿರ ಬಾರಿ ರಿಟ್ವಿಟ್ ಮಾಡಿದ್ದಾರೆ. ಸಚಿವರ ಬಳಿ ಇಂತಹ ಅಸಂಬದ್ಧ ಪ್ರಶ್ನೆಯನ್ನು ಕೇಳಿದ ವ್ಯಕ್ತಿಯನ್ನೂ ಟ್ವಿಟಿಗರು ಸರಿಯಾಗೇ ತರಾಟೆಗೆ ತೆಗೆದುಕೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.