ಸಂಗ್ರಹ ಚಿತ್ರ 
ದೇಶ

ತನ್ನ ಹಿಂದೂ ಪತ್ನಿಯ ಕೊನೆಯ ಆಸೆ ನೆರವೇರಿಸಲು ಹೋರಾಟ ನಡೆಸುತ್ತಿರುವ ಮುಸ್ಲಿಂ ಪತಿ!

ಪರ ಧರ್ಮದ ವ್ಯಕ್ತಿಯನ್ನು ವಿವಾಹವಾದಾಗ ಮಹಿಳೆ ಆ ವ್ಯಕ್ತಿಯ ಧರ್ಮಕ್ಕೆ ಮತಾಂತರವಾಗುವುದು ಸಾಮಾನ್ಯ. ಆದರೆ ನಿವೇದಿತಾ ಘಟಕ್ ಎಂಬುವರು ಮುಸ್ಲಿಂ ವ್ಯಕ್ತಿಯನ್ನು ವಿವಾಹವಾದರೂ...

ನವದೆಹಲಿ: ಪರ ಧರ್ಮದ ವ್ಯಕ್ತಿಯನ್ನು ವಿವಾಹವಾದಾಗ ಮಹಿಳೆ ಆ ವ್ಯಕ್ತಿಯ ಧರ್ಮಕ್ಕೆ ಮತಾಂತರವಾಗುವುದು ಸಾಮಾನ್ಯ. ಆದರೆ ನಿವೇದಿತಾ ಘಟಕ್ ಎಂಬುವರು ಮುಸ್ಲಿಂ ವ್ಯಕ್ತಿಯನ್ನು ವಿವಾಹವಾದರೂ ತಮ್ಮ ಹಿಂದೂ ಧರ್ಮವನ್ನು ಬಿಟ್ಟಿರಲಿಲ್ಲ. 
ನಿವೇದಿತಾ ಘಟಕ್ 1998ರಲ್ಲಿ ಮುಸ್ಲಿಂ ಧರ್ಮದ ರೆಹಮಾನ್ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದರು. ಬಹುಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ನಿವೇದಿತಾ ಅವರು ಇತ್ತೀಚೆಗೆ ಮೃತಪಟ್ಟಿದ್ದರು. ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿದ್ದಕ್ಕೆ ಮೃತ ಹಿಂದೂ ಮಹಿಳೆಯ ಶ್ರಾದ್ಧ ನಡೆಸಲು ದೇವಾಲಯವೊಂದರ ಸೊಸೈಟಿ ತಿರಸ್ಕರಿಸಿದೆ. 
ಪತಿ ಇಮ್ತಿಯಾಜ್ ಉರ್ ರೆಹಮಾನ್ ಆಗಸ್ಟ್ 6ರಂದು ನಿವೇದಿತಾ ಘಟಕ್ ಶ್ರಾದ್ಧವನ್ನು ಚಿತ್ತರಂಜನ್ ಪಾರ್ಕ್ ಕಾಳಿ ಮಂದಿರ ಸೊಸೈಟಿಯಲ್ಲಿ ನೆರವೇರಿಸಲು ಸಮಯ ಕೇಳಿದ್ದರು. ಅದಕ್ಕೆ ಸೊಸೈಟಿ ಆಗಸ್ಟ್ 12ರಂದು ನಡೆಸಲು ಅವಕಾಶ ನೀಡಿ 1,300 ರುಪಾಯಿ ಹಣವನ್ನು ಕಟ್ಟಿಸಿಕೊಂಡಿದ್ದರು. ಆದರೆ ಇದೀಗ ತಾವು ಶ್ರಾದ್ಧವನ್ನು ಮಾಡುವುದಿಲ್ಲ ಎಂದು ಸೊಸೈಟಿ ಅವರು ಹೇಳಿದ್ದು ತಾವು ಕಟ್ಟಿದ್ದ ಹಣವನ್ನು ಹಿಂಪಡೆಯುವಂತೆ ತಿಳಿಸಿದ್ದಾರೆ ಎಂದು ಇಮ್ತಿಯಾಜ್ ತಿಳಿಸಿದ್ದಾರೆ. 
ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿರುವುದಕ್ಕೆ ನಿವೇದಿತ ಅವರ ಶ್ರಾದ್ಧವನ್ನು ನೆರವೇರಿಸಲು ಸೊಸೈಟಿ ಹಿಂದೇಟು ಹಾಕುತ್ತಿದೆ ಎಂದು ಇಮ್ತಿಯಾಜ್ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT