ನಿದಾ ಖಾನ್ 
ದೇಶ

ತ್ರಿವಳಿ ತಲಾಖ್ ವಿರುದ್ಧ ಹೋರಾಟ ನಡೆಸಿದ್ದ ನಿದಾ ಖಾನ್ ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆ!

ತ್ರಿವಳಿ ತಲಾಖ್ ಮತ್ತು ಹಲಾಲಾ ಪದ್ಧತಿಗಳ ವಿರುದ್ಧ ಧ್ವನಿಯೆತ್ತಿರುವ ನಿದಾ ಖಾನ್ ಇದೀಗ ತಾವು ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ...

ನವದೆಹಲಿ: ತ್ರಿವಳಿ ತಲಾಖ್ ಮತ್ತು ಹಲಾಲಾ ಪದ್ಧತಿಗಳ ವಿರುದ್ಧ ಧ್ವನಿಯೆತ್ತಿರುವ ನಿದಾ ಖಾನ್ ಇದೀಗ ತಾವು ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ. 
ಬಿಜೆಪಿಗೆ ಸೇರ್ಪಡೆಯಾಗಿ ತ್ರಿವಳಿ ತಲಾಖ್ ಮತ್ತು ಹಲಾಲಾ ಪದ್ಧತಿಗಳ ವಿರುದ್ಧ ಹೋರಾಡುವುದಾಗಿ ನಿದಾ ಖಾನ್ ಹೇಳಿದ್ದಾರೆ. 24 ವರ್ಷದ ನಿದಾ ಖಾನ್ ತ್ರಿವಳಿ ತಲಾಖ್ ನ ಸಂತ್ರಸ್ತ ಮಹಿಳೆಯರಿಗಾಗಿ ಎನ್ಜಿಒವನ್ನು ನಡೆಸುತ್ತಿದ್ದಾರೆ. ತ್ರಿವಳಿ ತಲಾಖ್ ವಿರುದ್ಧ ಧ್ವನಿ ಎತ್ತಿದ್ದರಿಂದ ದರ್ಗಾ ಅಲಾ ಹರ್ಝತ್ ನಿಖಾ ವಿರುದ್ಧ ಫತ್ವಾ ಹೊರಡಿಸಿದ್ದು ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. 
ಬಿಜೆಪಿಗೆ ಸೇರ್ಪಡೆಯಾಗಿ ತ್ರಿವಳಿ ತಲಾಖ್, ಹಲಾಲ್ ಪದ್ಧತಿಗಳ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸುತ್ತೇನೆ, ಇನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕುರಿತಂತೆ ಯಾವಾಗ, ಯಾವ ಸ್ಥಳದಲ್ಲಿ ಕಾರ್ಯಕ್ರಮ ನಡೆಯುತ್ತದೆ ಎಂಬುದನ್ನು ಪಕ್ಷ ಇನ್ನು ತಿಳಿಸಿಲ್ಲ ಎಂದು ನಿದಾ ಖಾನ್ ಹೇಳಿದ್ದಾರೆ. 
ಉತ್ತರಖಂಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ರೇಖಾ ಆರ್ಯಾ ಅವರು ನಿದಾ ಖಾನ್ ರನ್ನು ಭೇಟಿಯಾಗಿ ಪಕ್ಷಕ್ಕೆ ಸೇರುವಂತೆ ಸಲಹೆ ನೀಡಿದ್ದರು. 
ನಿದಾ ಖಾನ್ ಸಹ ತ್ರಿವಳಿ ತಲಾಖ್ ಸಂತ್ರಸ್ತೆಯಾಗಿದ್ದು ಪತಿ ಶಿರೇನ್ ಆಕೆಗೆ ತಲಾಖ್ ನೀಡಿದ್ದರು. ಇದರ ವಿರುದ್ಧ ಹೋರಾಟ ನಡೆಸಿದ್ದ ನಿದಾ ಖಾನ್ ಗೆ ಭಾರೀ ಬೆಂಬಲ ಸಿಕ್ಕಿತ್ತು. ಅಲ್ಲದೆ ಬರೇಲಿಯ ಕೋರ್ಟ್ ನಿದಾ ಖಾನ್ ಗೆ ನೀಡಲಾಗಿರುವ ತ್ರಿವಳಿ ತಲಾಖ್ ಅಸಿಂಧುವೆಂದು ಘೋಷಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಹ್ಲಾದ್ ಜೋಶಿ ಕೊಳಕು ಮನುಷ್ಯ; ಅತ್ಯಾಚಾರಿಯನ್ನು ರಕ್ಷಿಸುವವರು ನೂತನ ಶಿಕ್ಷಣ ಸಚಿವರಾಗಿದ್ದಾರೆ: ರಾಹುಲ್ ಗಂಭೀರ ಆರೋಪ, Video

ಸಾಮಾಜಿಕ ಮಾಧ್ಯಮಗಳಿಗೆ ಕಡಿವಾಣ: ಮೆಟಾ, ಎಕ್ಸ್, ಗೂಗಲ್, ಸ್ನ್ಯಾಪ್‌ಚಾಟ್‌ಗೆ ಸಂಸದೀಯ ಸಮಿತಿ ಸಮನ್ಸ್

ಸಿಜೆಪಿ ನೇತೃತ್ವದ ಪ್ರತಿಭಟನೆಗೆ ಪಾಕಿಸ್ತಾನದ Gen Z ಬೆಂಬಲ: MEA ತೀಕ್ಷ್ಣ ಪ್ರತಿಕ್ರಿಯೆ! Video

'ನನ್ನ ಕಾಲುಗಳು ನಡುಗುತ್ತಿದ್ದವು'; ಕ್ಯಾರವಾನ್‌ಗೆ ನುಗ್ಗಿ ಶರ್ಟ್ ಬಿಚ್ಚಿದ...: ಆಘಾತಕಾರಿ ಅನುಭವ ಬಿಚ್ಚಿಟ್ಟ ನಟಿ Kajal Aggarwal

LS Debate: ದೇಶದ ಯುವಶಕ್ತಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಚ್ಚಿಬಿದ್ದಿದೆ: ಸಂಸದೆ ಪ್ರಿಯಾಂಕಾ ವಾದ್ರಾ