ಮಮತಾ ಬ್ಯಾನರ್ಜಿ 
ದೇಶ

ಅಮಿತ್ ಶಾ ಕೋಲ್ಕತಾ ರ್ಯಾಲಿ ದೊಡ್ಡ 'ಫ್ಲಾಪ್ ಶೋ': ಟಿಎಂಸಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ನಗರದಲ್ಲಿ ನಡೆಸಿದ ರ್ಯಾಲಿ ಒಂದು ದೊಡ್ಡ 'ಫ್ಲಾಪ್ ಶೋ' ....

ಕೋಲ್ಕತಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ನಗರದಲ್ಲಿ ನಡೆಸಿದ ರ್ಯಾಲಿ ಒಂದು ದೊಡ್ಡ 'ಫ್ಲಾಪ್ ಶೋ' ಎಂದು ತೃಣಮೂಲ ಕಾಂಗ್ರೆಸ್ ಟೀಕಿಸಿದೆ.
ನಮ್ಮ ರ‍್ಯಾಲಿಯನ್ನು ಜನರು ನೋಡದಂತೆ ಮಾಡಲು ಎಲ್ಲ ಬೆಂಗಾಲಿ ಚಾನೆಲ್‌ಗಳ ಸಿಗ್ನಲ್‌ಗಳನ್ನು ದುರ್ಬಲಗೊಳಿಸಲಾಗಿದೆ ಎಂಬ ಅಮಿತ್ ಶಾ ಆರೋಪವನ್ನು ಸ್ಪಷ್ಟವಾಗಿ ತಳಿಹಾಕಿದ ಟಿಎಂಸಿ, ಮಾಧ್ಯಮಗಳಿಗೆ ಅವಮಾನ ಮಾಡಬೇಡಿ. ಅವರು ಎಲ್ಲವನ್ನೂ ತೋರಿಸಿದ್ದಾರೆ ಎಂದು ಟಾಂಗ್ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಮತ್ತೊಂದು ಫ್ಲಾಪ್ ಶೋ ಈಗಷ್ಟೇ ಮುಕ್ತಾಯವಾಗಿದೆ. ಫ್ಲಾಪ್ ಶೋ ನಂತರ ಈಗ ಅದಕ್ಕೆ ಕಾರಣಗಳನ್ನು ಹುಡುಕುತ್ತಿದ್ದಾರೆ ಎಂದು ಟಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೋಲ್ಕತಾದ ಮಯೋ ರಸ್ತೆಯಲ್ಲಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅಲ್ಲದೆ 
ನಮ್ಮ ರ‍್ಯಾಲಿಯನ್ನು ಜನರು ನೋಡದಂತೆ ಮಾಡಲು ಎಲ್ಲ ಬೆಂಗಾಲಿ ಚಾನೆಲ್‌ಗಳ ಸಿಗ್ನಲ್‌ಗಳನ್ನು ದುರ್ಬಲಗೊಳಿಸಲಾಗಿದೆ. ಈ ಮೂಲಕ ನಮ್ಮ ದನಿಯನ್ನು ಅಡಗಿಸಲು ಯತ್ನಿಸಲಾಗುತ್ತಿದೆ. ಆದರೆ ಪ್ರತಿ ಜಿಲ್ಲೆಗೂ ತೆರಳಿ ಟಿಎಂಸಿಯನ್ನು ಕಿತ್ತು ಹಾಕುತ್ತೇವೆ ಎಂದು ಅಮಿತ್ ಶಾ ಗುಡುಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT