ದೇಶ

ಬಿಹಾರ: ವಸತಿ ನಿಲಯದಲ್ಲಿ ಶೋಷಣೆ ಪ್ರಕರಣ : ಕಿಂಗ್ ಪಿನ್ ನಿಂದ 40 ಪೋನ್ ನಂಬರ್ಸ್ ವಶ

Nagaraja AB

ಪಾಟ್ನಾ : ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿರುವ ಬಿಹಾರ ವಸತಿ ನಿಲಯದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಶೋಷಣೆ ಪ್ರಕರಣದಲ್ಲಿ  ಮುಜಫ್ಪರ್ ಪುರ್ ವಿನ ಸೆಂಟ್ರಲ್ ಜೈಲಿನಲ್ಲಿರುವ  ಪ್ರಮುಖ ಆರೋಪಿ ಬ್ರಜೇಶ್ ಠಾಕೂರ್ ನಿಂದ  40ಪೋನ್ ನಂಬರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜೈಲಿನ ಸಂದರ್ಶಕರ ಪ್ರದೇಶದಲ್ಲಿ  ಠಾಕೂರ್ ಇದ್ದ ಸ್ಥಳದಲ್ಲಿದ್ದ  ಅಧಿಕಾರಿಗಳು ಎರಡು ಪುಟಗಳಷ್ಟು ಕೈ ಬರಹದಲ್ಲಿದ್ದ 40 ಪೋನ್ ನಂಬರ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು  ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಶೋಧ ಕಾರ್ಯಾಚರಣೆ ವೇಳೆಯಲ್ಲಿ ಸಚಿವರು ಸೇರಿದಂತೆ ಕೆಲ ಪ್ರಭಾವಶಾಲಿ ವ್ಯಕ್ತಿಗಳ  ಹೆಸರುಗಳು ಕಂಡುಬಂದಿತ್ತು ಎಂದು ಜಿಲ್ಲಾಡಳಿತದ ಅಧಿಕಾರಿಗಳು ಹೇಳಿದ್ದಾರೆ.

ಬಿಹಾರ ಪೊಲೀಸರು ಕಳೆದ ರಾತ್ರಿ ಡಜನ್ ಗೂ ಹೆಚ್ಚು ಜೈಲುಗಳ ಮೇಲೆ ದಾಳಿ ನಡೆಸಿದ್ದು, ಕಾರಾಗೃಹದಲ್ಲಿನ ಆಕ್ಷೇಪಾರ್ಹ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜೂನ್ 2 ರಂದು ಬಂಧನಕ್ಕೊಳಗಾಗಿರುವ ಬ್ರಿಜೇಶ್ ಠಾಕೂರ್ ಐದು ದಿನಗಳನ್ನು ಮುಜಾಫ್ಪರ್ ಪುರ್ ವಿನ ಸೆಂಟ್ರಲ್ ಜೈಲಿನಲ್ಲಿ ಕಳೆದಿದ್ದಾನೆ.


ಆರೋಗ್ಯದ ಆಧಾರದ ಮೇಲೆ ಆತನನ್ನು ಕಾರಾಗೃಹ ವಾರ್ಡ್ ನಲ್ಲಿ ಇರಿಸಿಲ್ಲ , ವೈದ್ಯಕೀಯ ವಾರ್ಡ್ ನಲ್ಲಿ ಆತ ಇದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದು, ಪಾಟ್ನಾ ಹೈಕೋರ್ಟ್ ಮೇಲ್ವಿಚಾರಣೆ ಮಾಡುತ್ತಿದೆ.

SCROLL FOR NEXT