ಗುಜರಾತ್: ಕಂದಕಕ್ಕೆ ಉರುಳಿ ಬಿದ್ದ ಕಾರು, ಒಂದೇ ಕುಟುಂಬದ 7 ಮಕ್ಕಳು ದುರ್ಮರಣ 
ದೇಶ

ಗುಜರಾತ್: ಕಂದಕಕ್ಕೆ ಉರುಳಿ ಬಿದ್ದ ಕಾರು, ಒಂದೇ ಕುಟುಂಬದ 7 ಮಕ್ಕಳು ದುರ್ಮರಣ

ಕಾರೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ 7 ಮಕ್ಕಳು ದುರ್ಮರಣವನ್ನಪ್ಪಿರುವ ಘಟನೆ ಗುಜರಾತ್ ರಾಜ್ಯದ ಪಂಚಮಹಲ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ...

ಪಂಚಮಹಲ್: ಕಾರೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ 7 ಮಕ್ಕಳು ದುರ್ಮರಣವನ್ನಪ್ಪಿರುವ ಘಟನೆ ಗುಜರಾತ್ ರಾಜ್ಯದ ಪಂಚಮಹಲ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. 
ಜಂಬುಘೋಡಾ ನಗರದ ಭಟ್ ಗ್ರಾಮದಲ್ಲಿರುವ ಹಲೋಲ್-ಬೊಡೆಲಿ ರಸ್ತೆಯಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಚಾಲಕ ಕಾರಿನ ಮೇಲಿದ್ದ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ಈ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. 
ಕಾರಿನಲ್ಲಿ ಒಂದೇ ಕುಟುಂಬದ 7 ಮಕ್ಕಳು ಸೇರಿ ಒಟ್ಟು 10 ಮಂದಿ ಪ್ರಯಾಣಿಸುತ್ತಿದ್ದರು. ಕಾರು ಕಂದಕಕ್ಕೆ ಉರುಳಿ ಬೀಳುತ್ತಿದ್ದಂತೆಯೇ ಕೆಲ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ 10 ಮಂದಿಯ ಪೈಕಿ ಮೂವರನ್ನು ರಕ್ಷಣೆ ಮಾಡಿದ್ದಾರೆ. ಆದರೆ, 7 ಮಕ್ಕಳನ್ನು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. 
ಕಾರಿನಲ್ಲಿ 7 ಮಕ್ಕಳು ಸೇರಿ ಒಟ್ಟು 10 ಮಂದಿ ಪ್ರಯಾಣಿಸುತ್ತಿದ್ದರು. ಪಂಚಮಹಲ್ ನಲ್ಲಿರುವ ಕಂದಕಕ್ಕೆ ಕಾರು ಉರುಳಿಸಿದೆ. ಈ ವೇಳೆ 7 ಮಕ್ಕಳು ಸಾವನ್ನಪ್ಪಿದ್ದಾರೆ. ರಕ್ಷಣೆ ಮಾಡಲಾಗಿದ್ದ ಮೂವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಎಬಿ ದೆವ್ಧಾ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೀತ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

CJP ಪ್ರತಿಭಟನೆ ಹಿನ್ನೆಲೆಯಲ್ಲಿ ರೈಲುಗಳ ರದ್ದತಿ: ಯುವಕರಿಗೆ ಹೆದರುವುದಾದರೆ ಇಡೀ ದೇಶವನ್ನೇ ಬಂದ್ ಮಾಡಿ; ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ 1.10 ಲಕ್ಷ ಫಾರಂ-7 ಅರ್ಜಿ ಸ್ವೀಕೃತಿ, 40.88 ಲಕ್ಷ ನೋಟಿಸ್ ವಿಚಾರಣೆ ಪೂರ್ಣ: ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!