ದೇಶ

ಕರುಣಾನಿಧಿ ನಿಧನದ ವಿಚಾರದಲ್ಲಿ ರಜನಿಕಾಂತ್ ರಾಜಕೀಯ- ತಮಿಳುನಾಡು ಸಚಿವ

Nagaraja AB

ಚೆನ್ನೈ : ಡಿಎಂಕೆ ವರಿಷ್ಠ ಕರುಣಾನಿಧಿ ನಿಧನದ ವಿಚಾರದಲ್ಲಿ  ಸೂಪರ್ ಸ್ಟಾರ್ ಕಮ್ ರಾಜಕಾರಣಿ  ರಜನಿಕಾಂತ್ ರಾಜಕೀಯ ಮಾಡುತ್ತಿದ್ದಾರೆ ಎಂದು ತಮಿಳುನಾಡು ಸಚಿವ ಡಿ. ಜಯ ಕುಮಾರ್ ಆರೋಪಿಸಿದ್ದಾರೆ.

ರಜನಿಕಾಂತ್ ಅವರಿಗೆ ತಮಿಳುನಾಡು ರಾಜಕೀಯ ಗೊತ್ತಿಲ್ಲ. ಕರುಣಾನಿಧಿ ನಿಧನ ಕುರಿತಂತೆ ರಜನಿಕಾಂತ್ ಅವರ ಹೇಳಿಕೆ ಅಪಕ್ವತೆ ತೋರುತ್ತದೆ. ಅವರಿನ್ನೂ ರಾಜಕೀಯವಾಗಿ ಪಕ್ವಗೊಂಡಿಲ್ಲ ಎಂದು ಅವರು ಟೀಕಿಸಿದ್ದಾರೆ.

ಕರುಣಾನಿಧಿ ಅವರ  ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಇ. ಕೆ. ಪಳನಿಸ್ವಾಮಿ ಸೇರಿದಂತೆ  ಸಚಿವರೆಲ್ಲರೂ ಪಾಲ್ಗೊಳ್ಳಬೇಕಿತ್ತು ಎಂದು ರಜನಿಕಾಂತ್  ನೀಡಿದ ಹೇಳಿಕೆ ನಂತರ ಜಯಕುಮಾರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಕರುಣಾನಿಧಿ ಅವರ ಅಂತ್ಯಸಂಸ್ಕಾರದ ವೇಳೆಯಲ್ಲಿ ರಾಜ್ಯಪಾಲ ಬನ್ವಾರಿಲಾಲ್  ಪುರೋಹಿತರಿಂದ ಹಿಡಿದು  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವರೆಗೂ ದೇಶದ ಹಲವು ಕಡೆಗಳಿಂದ ಅನೇಕ ಮುಖಂಡರು ಭಾಗವಹಿಸಿದ್ದರು. ಆದರೆ,  ತಮಿಳುನಾಡು ಮುಖ್ಯಮಂತ್ರಿ , ಸಂಪುಟ ಬಂದಿಲ್ಲವಲ್ಲ ಎಂದು  ರಜನಿಕಾಂತ್  ಟೀಕಿಸಿದ್ದರು.

ಕರುಣಾನಿಧಿ ನಿಧನ ಹಿನ್ನೆಲೆಯಲ್ಲಿ ದಕ್ಷಿಣ ಭಾರತೀಯ ಕಲಾವಿದರ ಸಂಘ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ರಜನಿಕಾಂತ್,  ಡಿಎಂಕೆ ಮೂಲಕ ಕರುಣಾನಿಧಿ ಅನೇಕ  ಚುನಾವಣೆಗಳಲ್ಲಿ ಗೆದ್ದಿದ್ದಾರೆ , ಸೋತಿದ್ದಾರೆ. ವಿಶ್ವದ ಯಾವ ನಾಯಕರು ತಮಿಳುನಾಡುಗೆ ಭೇಟಿ ನೀಡಿದ್ದರೆ ಅವರು ಕರುಣಾನಿಧಿ ಅವರನ್ನು ಭೇಟಿ ಮಾಡುತ್ತಿದ್ದರು. ನಂತರ ಇಲ್ಲಿ ಯಾರನ್ನೂ ಭೇಟಿ ಮಾಡುತ್ತಾರೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದರು.

SCROLL FOR NEXT