ದೇಶ

ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ; ಓರ್ವ ಉಗ್ರ ಸಾವು

Sumana Upadhyaya

ಶ್ರೀನಗರ: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಉಗ್ರಗಾಮಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರಗಾಮಿ ಹತ್ಯೆಗೀಡಾಗಿದ್ದಾನೆ.

ಇಂದು ಬೆಳಗ್ಗೆ ಅನಂತ್ ನಾಗ್ ಜಿಲ್ಲೆಯ ಕೊಕೆರ್ನಾಗ್ ನಲ್ಲಿ ಗಂಡೊಲೆ ಗ್ರಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರಗಾಮಿ ಹತನಾಗಿದ್ದಾನೆ. ಇದೀಗ ಗುಂಡಿನ ಚಕಮಕಿ ನಿಂತಿದ್ದು ಶೋಧ ಕಾರ್ಯ ಮುಂದುವರಿದಿದೆ. ಹತ್ಯೆಗೀಡಾದ ಉಗ್ರನ ಪತ್ತೆ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರು ಅಡಗುತಾಣಗಳಲ್ಲಿ ಅವಿತು ಕುಳಿತಿದ್ದಾರೆ ಎಂದು ನಿಖರ ಮಾಹಿತಿ ಪಡೆದ ಭದ್ರತಾ ಪಡೆ ಸಿಬ್ಬಂದಿ ಇಂದು ನಸುಕಿನ ಜಾವ ಗ್ರಾಮವನ್ನು ಸುತ್ತುವರಿದರು. ಭದ್ರತಾ ಪಡೆಗಳು ಆಗಮಿಸಿರುವುದನ್ನು ಗಮನಿಸಿದ ಭಯೋತ್ಪಾದಕರು ಗುಂಡಿನ ದಾಳಿ ಆರಂಭಿಸಿದರು. ಇದರಲ್ಲಿ ಓರ್ವ ಹತನಾಗಿದ್ದಾನೆ. ಇನ್ನೂ ಮೂವರು ಉಗ್ರರು ಅವಿತು ಕುಳಿತಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ರದ್ದುಪಡಿಸಲಾಗಿದೆ.

SCROLL FOR NEXT