ನವದೆಹಲಿ: ಒಂದು ಟಿವಿ ಸೆಟ್, ವೈಯಕ್ತಿಕ ಶೌಚಾಲಯ, ಹಾಸಿಗೆ, ಬಾತ್ ರೂಂ ಏರಿಯಾ, ಸೂರ್ಯನ ಬೆಳಕು ಬೀಳುವಂತೆ ಒಂದು ವರಾಂಡಾ - ಇದು ಮುಂಬೈನ ಅರ್ಥರ್ ರೋಡ್‌ನಲ್ಲಿರುವ ಬ್ಯಾರಕ್ ನಂಬರ್ 12 ನ ಕೆಲ ವಿಶೇಷತೆಗಳು! ಇದು ಮದ್ಯದ ದೊರೆ ವಿಜಯ್ ಮಲ್ಯ ಭವಿಷ್ಯದ ನಿವಾಸ!!
ಹೌದು, ಸಾವಿರಾರು ಕೋಟಿ ಸಾಲ ಮಾಡಿ ವಿದೇಶಕ್ಕೆ ಪಲಾಯನ ಮಾಡಿರುವ ವಿಜಯ್ ಮಲ್ಯ ಅವರನ್ನು ಬಂಧಿಸಿಡಲು ಮುಂಬೈನ ಅರ್ಥರ್ ರೋಡ್ ಜೈಲಿನಲ್ಲಿ ತಯಾರಾದ "ಹೈಟೆಕ್ ಜೈಲು" ಇದು. ಮಲ್ಯರನ್ನು ಭಾರತಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿರುವ ಸಮಯಕ್ಕೇ ಭಾರತದ ಜೈಲುಗಳ ಪರಿಸ್ಥಿತಿ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದ್ದ ಮಲ್ಯಗೆ ಪ್ರತ್ಯುತ್ತರವಾಗಿ ಭಾರತೀಯ ತನಿಕಾಧಿಕಾರಿಗಳು ನ್ಯಾಯಾಲಯಕ್ಕೆ ಜೈಲಿನ ಸೌಲಭ್ಯಗಳ ವಿವರವಾದ ವೀಡಿಯೋ ದೃಶ್ಯವನ್ನು ಸಲ್ಲಿಸಿದ್ದಾರೆ.
ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ನಡೆದ ವಿಚಾರಣೆ ವೇಳೆ ಮಲ್ಯ "ತಾನು ತನ್ನ ಆಸ್ತಿಯನ್ನು ಮಾರಿ ಸಾಲ ತೀರಿಸುತ್ತೇನೆ. ಆದರೆ ನಾನು ಭಾರತಕ್ಕೆ ಮರಳಿದರೆ ನನ್ನನ್ನು ಜೈಲಿಗೆ ಹಾಕಲಾಗುತ್ತದೆ. ಆ ಜೈಲುಗಳಲ್ಲಿ ಸರಿಯಾದ ನೈಸರ್ಗಿಕ ಗಾಳಿ, ಬೆಳಕಿನ ವ್ಯವಸ್ಥೆ ಇಲ್ಲ" ಎಂದು ಆಕ್ಷೇಪಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ಜೈಲು ಸಔಲಭ್ಯಗಳನ್ನು ತೋರಿಸುವ 6-8 ನಿಮಿಷಗಳ ವಿಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಮಲ್ಯ ಪರ ವಕೀಲರು ಭಾರತದ ಜೈಲುಗಳಲ್ಲಿ ಸರಿಯಾದ ನೈರ್ಮಲ್ಯ ಗುಣಮಟ್ಟ, ವೈಉದ್ಯಕೀಯ ಸೌಲಭ್ಯಗಳಿಲ್ಲ ಎಂದಿದ್ದು ಇದಕ್ಕೆ ಪ್ರತಿಯಾಗಿ ನ್ಯಾಯಾಲಯ ಮಲ್ಯರನ್ನು ಭಾರತಕ್ಕೊಪ್ಪಿಸುವ ಮುನ್ನ ಭಾರತೀಓಯ ಜೈಲುಗಳ ಗುಣಮಟ್ಟವನ್ನು ಖಾತ್ರಿ ಪಡಿಸಬೇಕೆಂದು ಕೇಳಿತ್ತು.
ಮುಂಬೈನ ಅರ್ಥರ್ ರೋಡ್ ನಲ್ಲಿರುವ ಜೈಲಿನಲ್ಲಿ ಮಲ್ಯರನ್ನು ಇರಿಸಲಾಗುತ್ತದೆ.ಇದರಲ್ಲಿನ ಬ್ಯಾರಕ್ ನಂಬರ್ 12 ನಲ್ಲಿರುವ ಸೌಲಭ್ಯಗಳ ವಿವರವನ್ನೊಳಗೊಂಡ ವೀಡಿಯೋ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಈ ಕೊಠಡಿ ಪೂರ್ವಕ್ಕೆ ತೆರೆದುಕೊಂಡಿದೆ, ಹೀಗಾಗಿ ಇಲ್ಲಿ ಸೂರ್ಯನ ಬೆಳಕು ಧಾರಾಳವಾಗಿರಲಿದೆ ಎಂದು ಅಧಿಕಾರಿಗಳು ಹೇ:ಳಿದ್ದಾರೆ.
ಇನ್ನು ಜೈಲು ಭದ್ರತೆಯು ಅಂತರರಾಷ್ಟ್ರೀಯ ಮಾನದಂಡಗಳಿಗೆ ತಕ್ಕಹಾಗಿದೆ ಎನ್ನುವುದನ್ನು ನಾವು ಈ ಹಿಂದಿನ ಕೆಲ ವಿಚಾರಣೆಗಳಲ್ಲಿಯೇ ನ್ಯಾಯಾಲಯಕ್ಕೆ ಮನದಟ್ಟು ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ. ಖೈದಿಗಳ ಚಲನ ವಲನ ಪರಿಶೀಲನೆಗೆ ಸಿಸಿಟಿವಿ ಕ್ಯಾಮರಾಗಳಿದೆ ಅಷ್ಟೇ ಅಲ್ಲದೆ ಹೆಚ್ಚುವರಿ ಸಿಬ್ಬಂದಿಗಳು ಸಹ ಭದ್ರತೆ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಭಾರತದ ಹಲವು ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಕೋಟ್ಯಾಂತರ ರೂ. ವಂಚಿಸಿದ್ದ ವಿಜಯ್ ಮಲ್ಯ ಮಾರ್ಚ್ 2016 ರಲ್ಲಿ ಭಾರತವನ್ನು ತೊರೆದ ನಂತರ ಬ್ರಿಟನ್ ನಲ್ಲಿ ನೆಲೆಸಿದ್ದಾರೆ. ಇವರು ಸುಮಾರು 9,000 ಕೋಟಿ ರೂ.ಗಳನ್ನು ಬ್ಯಾಂಕ್ ಗಳಿಗೆ ಪಾವತಿಸಬೇಕಾಗಿದ್ದು ಇವರ ವಿರುದ್ಧ ಕಳೆದ ವರ್ಷ ಡಿಸೆಂಬರ್ 4 ರಂದು ಲಂಡನ್ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿದೆ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos