ಸಂಗ್ರಹ ಚಿತ್ರ 
ದೇಶ

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಪೊಲೀಸರ ಮನೆಗೆ ನುಗ್ಗಿ 11 ಮಂದಿ ಅಪಹರಣ

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, 5 ಪೊಲೀಸರ ಮನೆಗಳಿಗೆ ನುಗ್ಗಿರುವ ಉಗ್ರರು 9 ಮಂದಿಯನ್ನು ಅಪಹರಣ ಮಾಡಿ ಭದ್ರತಾ ಪಡೆಗಳಿಗೆ ಸವಾಲು ಹಾಕಿದ್ದಾರೆ...

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, 5 ಪೊಲೀಸರ ಮನೆಗಳಿಗೆ ನುಗ್ಗಿರುವ ಉಗ್ರರು 11 ಮಂದಿಯನ್ನು ಅಪಹರಣ ಮಾಡಿ ಭದ್ರತಾ ಪಡೆಗಳಿಗೆ ಸವಾಲು ಹಾಕಿದ್ದಾರೆ. 
ಶೋಪಿಯಾನ್, ಕುಲ್ಗಾಮ್, ಅನಂತ್ ನಾಗ್ ಮತ್ತು ಅವಂತಿಪೋರಾದಲ್ಲಿರುವ ಪೊಲೀಸರ ಮನೆಗಳಿಗೆ ಗುರುವಾರ ರಾತ್ರಿ ನುಗ್ಗಿರುವ ಉಗ್ರರು 11 ಮಂದಿಯನ್ನು ಅಪಹರಣ ಮಾಡಿದ್ದಾರೆಂದು ತಿಳಿದುಬಂದಿದೆ. 
ಅಹಕರಣಕ್ಕೊಳಗಾಗಿರುವವರನ್ನು ಅರಾವಾನಿ ನಿವಾಸಿಯಾಗಿರುವ ಪೊಲೀಸ್ ಮೊಹಮ್ಮದ್ ಮುಕ್ಭೂಲ್ ಭಟ್ ಪುತ್ರ ಜುಬೈರ್ ಅಹ್ಮದ್ ಭಟ್, ಪೊಲೀಸ್ ಅಧಿಕಾರಿ ನಾಝೀರ್ ಅಹ್ಮದ್ ಶಂಕರ್ ಸಹೋದರ ಆರೀಫ್ ಅಹ್ಮದ್ ಸಂಕರ್, ಪೇದೆ ಬಶೀರ್ ಅಹ್ಮದ್ ಮಕ್ರೋ ಪುತ್ರ ಫೈಜಾನ್ ಅಹ್ಮದ್ ಮಕ್ರೋ, ಪೊಲೀಸ್ ಅಬ್. ಸಲಾರ್ ರಥೆರ್ ಪುತ್ರ ಸುಮರ್ ಅಹ್ಮದ್ ರಾಥೆರ್, ಡಿಎಸ್'ಪಿ ಐಜಾಜ್ ಸಹೋದರ ಗೊಹೆರ್ ಅಹ್ಮದ್ ಮಲಿಕ್, ಪೊಲೀಸ್ ಅಧಿಕಾರಿ ಬಷೀರ್ ಅಹ್ಮದ್ ಭಟ್ ಅವರ ಪುತ್ರ ಯಾಸಿರ್ ಅಹ್ಮದ್ ಭಟ್, ಪೊಲೀಸರಾದ ನಾಸೀರ್ ಅಹ್ಮದ್ ಮತ್ತು ಶಬೀರ್ ಅಹ್ಮದ್ ಜರ್ಗರ್, ಆಸೀಫ್ ಅಹ್ಮದ್ ರಾಥೆರ್ ಎಂದು ಗುರ್ತಿಸಲಾಗಿದೆ. 
ದಕ್ಷಿಣ ಕಾಶ್ಮೀರ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ನಾಲ್ವರು ಪೊಲೀಸರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಉಗ್ರರ ಮನೆಗಳನ್ನು ಧ್ವಂಸಗೊಳಿಸಿದ್ದರು. ಅಲ್ಲದೆ, ಅವರ ಸಂಬಂಧಿಕರನ್ನು ಬಂಧನಕ್ಕೊಳಪಡಿಸಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇದೀಗ ಉಗ್ರರು ಪೊಲೀಸರು ಹಾಗೂ ಅವರ ಸಂಬಂಧಿಕರನ್ನು ಅಪಹರಣ ಮಾಡಿದ್ದಾರೆಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT