ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್
ನವದೆಹಲಿ: ನೋಟು ನಿಷೇಧ ಕಪ್ಪುಹಣದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಅವರು ಸೋಮವಾರ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿ ನಡೆಸಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ನೋಟು ನಿಷೇಧ ಕಪ್ಪುಹಣಕ್ಕೆ ಕಡಿವಾಣ ಹಾಕಲಿದೆ ಎಂದು ನಂಬಲಾಗಿತ್ತು. ಆದರೆ, ವರದಿಗಳನ್ನು ನೋಡಿದರೆ, ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿಯ ಚುನಾವಣೆ ವೇಳೆಯೇ ಹೆಚ್ಚು ಕಪ್ಪುಹಣವನ್ನು ನಾವು ವಶಪಡಿಸಿಕೊಂಡಿದ್ದೇವೆ. ರಾಜ್ಯಗಳಲಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ವೇಳೆ ಕಪ್ಪುಹಣವನ್ನು ಆಯೋಗ ವಶಪಡಿಸಿಕೊಂಡಿದೆ ಎಂದು ಹೇಳಿದ್ದಾರೆ.
ಚುನಾವಣೆ ವೇಳೆ ಬಳಕೆಯಾದ ಕಪ್ಪುಹಣವನ್ನು ಪರಿಶೀಲನೆ ನಡೆಸಿಯೇ ಇಲ್ಲ. ರಾಜಕೀಯ ಗಣ್ಯರು ಹಾಗೂ ಬಂಡವಾಳಗಾರರಿಗೆ ಹಣದ ಕೊರತೆಯಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಸಾಮಾನ್ಯವಾಗಿ ಹಣವನ್ನು ಕಪ್ಪುಹಣದ ರೀತಿಯಲ್ಲಿಯೇ ಬಳಕೆ ಮಾಡಲಾಗುತ್ತದೆ. ಚುನಾವಣೆ ವೇಳೆ ಬಳಕೆಯಾಗುವ ಹಣವನ್ನು ಪರಿಶೀಲನೆ ನಡೆದಿಲ್ಲ. ಇಲ್ಲಿಯವರೆಗೆ ರೂ.200ಕೋಟಿಗಿಂತಲೂ ಹೆಚ್ಚು ಕಪ್ಪುಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಂತರ್ಜಾಲದೊಂದಿಗೆ ಸಂಪರ್ಕ ಹೊಂದಿರುವ ಮಂತಯಂತ್ರಗಳನ್ನು ಯಾವುದೇ ರೀತಿಯಲ್ಲಿಯೂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಶೇ.99 ರಷ್ಟು ರಾಜಕೀಯ ಪಕ್ಷಗಳಿ ಇವಿಎಂನ್ನು ಬೆಂಬಲಿಸುತ್ತಿವೆ. ಇದನ್ನು ಪರಿಶೀಲಿಸಬೇಕು ಎಂಬುದೇ ಆದರೆ, ಯಾರು ಬೇಕಾದರೂ ಆಯೋಗವನ್ನು ಸಂಪರ್ಕಿಸಬಹುದು. ಆಯೋಗ ಇದಕ್ಕಾಗಿ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos