ಹೈದರಾಬಾದ್: ನಾನು ಕೇವಲ ತೆಲಂಗಾಣ ಜನತೆಯ ಏಜೆಂಟ್, ಬಿಜೆಪಿ ಅಥವಾ ಕಾಂಗ್ರೆಸ್ ಏಜೆಂಟ್ ಅಲ್ಲ ಎಂದು ತೆಲಂಗಾಣ ಹಂಗಾಮಿ ಮುಖ್ಯಮಂತ್ರಿ ಹಾಗೂ ಟಿಆರ್ ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರು ಸೋಮವಾರ ಹೇಳಿದ್ದಾರೆ.
ಇಂದು ಸೂರ್ಯಪೇಟ್ ಜಿಲ್ಲೆಯ ಕೊಡದ್ ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿ ಮಾತನಾಡಿದ ಕೆಸಿಆರ್, ಪ್ರಧಾನಿ ನರೇಂದ್ರ ಮೋದಿ ಅವರು ನಾನು ಸೋನಿಯಾ ಗಾಂಧಿ ಏಜೆಂಟ್ ಎಂದು ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯ ಬಿ ಟೀಮ್ ಎಂದು ಆರೋಪಿಸುತ್ತಿದ್ದಾರೆ. ಆದರೆ ಕೆಸಿಆರ್ ತೆಲಂಗಾಣದ ಏಜೆಂಟ್ ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ ಎಂದರು.
ಇಂದು ಬೆಳಗ್ಗೆ ಕೆಸಿಆರ್ ಬಿಜೆಪಿಯ ಬಿ ಟೀಂ ಎಂದಿದ್ದ ರಾಹುಲ್ ಗಾಂಧಿ, ಜನರನ್ನು ಮುರ್ಖರನ್ನಾಗಿ ಮಾಡಬೇಡಿ ಎಂದು ಪ್ರಧಾನಿ ಮೋದಿ, ಕೆಸಿಆರ್ ಹಾಗೂ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿಗೆ ಒತ್ತಾಯಿಸಿದ್ದರು.