ದೇಶ

ಬುಲಂದಶಹರ್ ಹಿಂಸಾಚಾರ, ಪೊಲೀಸ್ ಹತ್ಯೆ ಪ್ರಕರಣ: 4 ಆರೋಪಿಗಳ ಬಂಧನ, ಎಸ್ಐಟಿ ತನಿಖೆ ಆರಂಭ

Manjula VN
ಬುಲಂದಶಹರ್: ಉತ್ತರಪ್ರದೇಶದ ಬುಲಂದಶಹರ್ ನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಹತ್ಯೆಯಾದ ಪೊಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆಂದು ಮಂಗಳವಾರ ತಿಳಿದುಬಂದಿದೆ. 
ಹತ್ಯೆಯಾದ ಪೊಲೀಸ್ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಮೀರುತ್'ನ ಎಡಿಜಿ ಪ್ರಶಾಂತ್ ಕುಮಾರ್ ಅವರು, ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ತನಿಖೆಯ ಮಾಹಿತಿಗಳ ಬಳಿಕ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಿದ್ದಾರೆ. 
ಸುಭೋಧ್ ಕುಮಾರ್ ಅವರ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. 4 ಆರೋಪಿಗಳನ್ನು ಈಗಾಗಲೇ ಬಂಧನಕ್ಕೊಳಪಡಿಸಲಾಗಿದ್ದು, ಮತ್ತಷ್ಟು ಜನರನ್ನು ಶೀಘ್ರದಲ್ಲಿಯೇ ಬಂಧನಕ್ಕೊಳಪಡಿಸಲಾಗುತ್ತದೆ. ಈಗಾಗಲೇ ಸರ್ಕಾರ ಮೃತಪಟ್ಟಿರುವ ಪೊಲೀಸ್ ಅಧಿಕಾರಿಗೆ ರೂ.50 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಇಲ್ಲದೆ, ಅಧಿಕಾರಿಯ ಪತ್ನಿಗೆ ಪಿಂಚಣಿ ನೀಡುವುದಾಗಿಯೂ ತಿಳಿಸಿದೆ. ಅಧಿಕಾರಿಯ ಕುಟುಂಬಸ್ಥರೊಬ್ಬರಿಗೆ ಸರ್ಕಾರಿ ಉದ್ಯೋಗ ಕೊಡುವುದಾಗಿ ಭರವಸೆ ನೀಡಿದೆ ಎಂದು ತಿಳಿಸಿದ್ದಾರೆ. 
ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಲಾಗಿದ್ದು, ಮೀರುತ್ ಐಜಿ ನೇತೃತ್ವದಲ್ಲಿ ತಂಡವನ್ನು ರಚಿಸಿ ತನಿಖೆ ಆರಂಭಿಸಲಾಗಿದೆ. ಈ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಿದೆ. ಹಿಂಸಾಚಾರ ಹೇಗೆ ಸೃಷ್ಟಿಯಾಯಿತು. ಅಧಿಕಾರಿಯ ಜೊತೆಗೆ ಎಷ್ಟು ಜನರಿದ್ದರು. ಎಷ್ಟು ಜನ ಸ್ಥಳದಿಂದ ಓಡಿಹೋಗಿದ್ದರು ಎಂಬೆಲ್ಲಾ ಮಾಹಿತಿಗಳನ್ನು ಎಸ್ಐಟಿ ಕಲೆ ಹಾಕಲಿದೆ. ಎಫ್ಐಆರ್ ನಲ್ಲಿ 8 ಮಂದಿ ಹೆಸರೂ ಕೂಡ ಇದೆ. ಮಾಹಿತಿ ಕಲೆ ಹಾಕಿ ಶೀಘ್ರದಲ್ಲಿ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗುತ್ತದೆ ಎಂದಿದ್ದಾರೆ. 
SCROLL FOR NEXT