ನವದೆಹಲಿ: ಕೇಂದ್ರ ಸಚಿವ ಸಂಪುಟ ಡಿ.07 ರಂದು ಕೃಷಿ ರಫ್ತು ನೀತಿ 2018 ನ್ನು ಅನುಮೋದಿಸಿದ್ದು, 2022 ರ ವೇಳೇಗೆ ಕೃಷಿ ರಫ್ತು 60 ಬಿಲಿಯನ್ ಡಾಲರ್ ಗೆ ಏರಿಕೆಯಾಗಲಿದೆ.
ಪ್ರಸ್ತುತ ಕೃಷಿ ರಫ್ತು 30 ಬಿಲಿಯನ್ ಡಾಲರ್ ನಷ್ಟಿದ್ದು, 2022 ರ ವೇಳೆಗೆ ಸ್ಥಿರ ವ್ಯಾಪಾರ ನೀತಿಯ ಮೂಲಕ 60 ಬಿಲಿಯನ್ ಡಾಲರ್ ಗೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ. ಈ ಗುರಿ ತಲುಪುವುದಕ್ಕಾಗಿ ಕೃಷಿ ಉತ್ಪನ್ನಗಳ ರಫ್ತು ನೀತಿ ಮಹತ್ವದ ಪಾತ್ರ ವಹಿಸಲಿದ್ದು, ಸರ್ಕಾರ ಸಮಗ್ರ ಕೃಷಿ ರಫ್ತಿ ನೀತಿಯನ್ನು ರೂಪಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ರಫ್ತು ಮಾರುಕಟ್ಟೆಯಲ್ಲಿ ವಿವಿಧತೆಯನ್ನು ಕಾಯ್ದುಕೊಳ್ಳುವುದು, ಮೌಲ್ಯವರ್ಧಿತ ಕೃಷಿ ರಫ್ತಿನ ಬಗ್ಗೆ ಹೆಚ್ಚು ಗಮನ ಹರಿಸುವುದರಿಂದ ರೈತರಿಗೆ ವಿದೇಶಿ ಮಾರುಕಟ್ಟೆಯಲ್ಲಿ ವ್ಯವಹರಿಸುವುದಕ್ಕೆ ಸಹಕಾರಿಯಾಗಲಿದೆ.