ಚಂಡೀಗಡ : ಕರ್ತಾಪುರ ಕಾರಿಡಾರ್ ಆರಂಭ ಪಾಕಿಸ್ತಾನ ಸೈನ್ಯದ ದೊಡ್ಡ ಪಿತೂರಿ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಕರ್ತಾಪುರ ಕಾರಿಡಾರ್ ಆರಂಭ ಐಸ್ ಐಎಸ್ ಐ ಆಟದ ಯೋಜನೆಯಾಗಿದ್ದು,ಭಾರತದ ವಿರುದ್ಧ ಪಾಕಿಸ್ತಾನ ಸೈನ್ಯದ ದೊಡ್ಡ ಪಿತೂರಿ ಎಂಬಂತೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.
ಸಿಧು ಹಾಗೂ ತಮ್ಮ ನಡುವಿನ ಸಂಬಂಧದ ಬಗ್ಗೆ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿರುವ ಅಕಾಲಿಕದಳ ಹಾಗೂ ಬಿಜೆಪಿ ಕೇಂದ್ರ ನಾಯಕತ್ವದ ವಿರುದ್ಧ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಾಗ್ದಾಳಿ ನಡೆಸಿದ್ದು, ಪಂಜಾಬ್ ನಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಪಿತ್ತೂರಿ ನಡೆಯುತ್ತಿದ್ದರೂ ಪಾಕಿಸ್ತಾನದ ವಿಷಯಕ್ಕಿಂತ ತಮ್ಮ ವಿಷಯದಲ್ಲಿ ಸಾರ್ವಜನಿಕರ ಗಮನವನ್ನು ತಿರುಗಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.