ದೇಶ

2016 ರಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಬಗ್ಗೆ ಅಂಕಿ-ಅಂಶವೇ ಇಲ್ಲ: ಲೋಕಸಭೆಗೆ ಕೃಷಿ ಸಚಿವ!

Srinivas Rao BV
ನವದೆಹಲಿ: ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದಿರುವುದು ಒಂದೆಡೆಯಾದರೆ,  ಮತ್ತೊಂದೆಡೆ ಕೃಷಿ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿವೆ. 
ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ನವದೆಹಲಿಯಲ್ಲಿ ಇತ್ತೀಚೆಗಷ್ಟೇ ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ ಈಗ ಸರ್ಕಾರ ಬಹಿರಂಗಪಡಿಸಿರುವ ಮಾಹಿತಿ ಅಘಾತಕಾರಿಯಾಗಿದೆ. 
ಕೇಂದ್ರದ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರು ಲೋಕಸಭೆಗೆ ನೀಡಿರುವ ಮಾಹಿತಿಯ ಪ್ರಕಾರ ಎನ್ ಸಿಆರ್ ಬಿ 2016 ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಬಗ್ಗೆ ಅಂಕಿ-ಅಂಶಗಳನ್ನೇ ಪ್ರಕಟಿಸಿಲ್ಲವಂತೆ!, ಟಿಎಂಸಿ ನಾಯಕ ದಿನೇಶ್ ತ್ರಿವೇದಿ ಅವರ 2016 ರಲ್ಲಿ ಎಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಅವರಿಗೆ ಸರ್ಕಾರ ಏನು ಪುನರ್ವಸತಿ ಕಲ್ಪಿಸಿಕೊಟ್ಟಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಕೃಷಿ ಸಚಿವ ರಾಧಾಮೋಹನ್ ಸಿಂಗ್, " ಆತ್ಮಹತ್ಯೆಗಳ ಅಂಕಿ-ಅಂಶಗಳನ್ನು ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿ ಬರುತ್ತದೆ. ಎನ್ ಸಿಆರ್ ಬಿ ವೆಬ್ ಸೈಟ್ ನಲ್ಲಿ ಈ ರೀತಿಯ ಪ್ರಕರಣಗಳ ಅಂಕಿ-ಅಂಶಗಳು 2015 ರ ವರೆಗೆ ಮಾತ್ರ ಲಭ್ಯವಿದೆ. 2016 ರ ಅಂಕಿ-ಅಂಶ ಇನ್ನೂ ಪ್ರಕಟಗೊಂಡಿಲ್ಲ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 
2015 ರ ವರದಿಯ ಪ್ರಕಾರ ಒಟ್ಟಾರೆ 8,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 3,030 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ ತೆಲಂಗಾಣದಲ್ಲಿ 1,358 ಹಾಗೂ ಕರ್ನಾಟಕದಲ್ಲಿ 1,197 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
SCROLL FOR NEXT