ಭೋಪಾಲ್" ನಾಲ್ಕು ಮಕ್ಕಳ ತಾಯಿಯೊಬ್ಬಳು ತಾನು ಆತ್ಮಹತ್ಯೆಗೆ ಶರಣಾಗುತ್ತಿದ್ದಾಗಲೇ ಐದನೇ ಮಗುವಿಗೆ ಜನ್ಮನೀಡಿರುವ ಅಪೂರ್ವ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ/
ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಲಕ್ಷ್ಮಿ ಠಾಕೂರ್ (36) ಹೀಗೆ ಆತ್ಮಹತ್ಯೆಗೆ ಶರಣಾದ ಮಹಿಳೆಯಾಫ಼್ಗಿದ್ದು ಆಕೆ ಸಾವನ್ನಪ್ಪುತ್ತಲೇ ಆಕೆಯ ಹೊಟ್ಟೆಯಲ್ಲಿದ್ದ ಕಂದಮ್ಮ ಈ ಜಗತ್ತನ್ನು ಪ್ರವೇಶಿಸಿದೆ. ಮಹಿಳೆ ಸಾಯುವ ಕಡೆ ಕ್ಷಣ ಅಥವಾ ಸತ್ತಮೇಲೆ ಪ್ರಸವವಾಗಿದ್ದು ಪೋಲೀಸರು ಶಿಶುವನ್ನು ರಕ್ಷಿಸಿದ್ದಾರೆ.
ಇಂತಹಾ ಪ್ರಕರಣ ಜಗತ್ತಿನಲ್ಲೇ ಇದೇ ಮೊದಲು ನಡೆದಿರಬಹುದು ಎಂದು ಪೋಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು ಲಕ್ಷ್ಮಿಯ ಪತಿ ಸಂತೋಷ್ .ಪತ್ನಿ ಕೊತ್ಟಿಗೆಯಲ್ಲಿ ನೇಣು ಬಿಗಿದುಕೊಂಡಿರುವದನ್ನು ಕಂಡಿದ್ದು ಪೋಲೀಸರಿಗೆ ಮಾಹಿತಿ ನೀಡಿದ್ದಾನೆ. ಆಗ ಸ್ಥಳಕ್ಕೆ ಧಾವಿಸಿದ ಪೋಲೀಸರಿಗೆ ಅಚ್ಚರಿ ಕಾದಿತ್ತು. ಮೃತ ಮಹಿಳೆಯ ಕಾಲುಗಳ ಮಧ್ಯದಲ್ಲಿ ಸೀರೆಯಲ್ಲಿ ಸಿಲುಕಿಕೊಂಡಿದ್ದ ಹೊಕ್ಕಳು ಬಳ್ಳಿ ಸಹಿತವಾಗಿ ಆಗ ತಾನೆ ಜನಿಸಿದ ಮಗು ಅವರ ಕಣ್ಣಿಗೆ ಬಿದ್ದಿದೆ.
ಸಬ್ ಇನ್ಸಪೆಕ್ಟರ್ ಕವಿತಾ ಸಾಹ್ನಿ ತಕ್ಷಣ ಮಗು ಸಹಿತ ಶವವನ್ನು ಕೆಳಗಿಳಿಸಿಮಗುವನ್ನು ಸ್ವಚ್ಚಗೊಳಿಸಿ ತಾಯಿಯ ಮೃತದೇಹದ ಪಕ್ಕ ಇಟ್ಟಿದ್ದಾರೆ. ಬಳಿಕ ಆಗಮಿಸಿದ ವೈದ್ಯರು ಹೊಕ್ಕಳ ಬಳ್ಳಿಯನ್ನು ಕತ್ತರಿಸಿ ಶಿಶುವನ್ನು ತಾಯಿಯಿಂದ ಬೇರ್ಪಡಿಸಿದ್ದಾರೆ. ಸಧ್ಯ ಶಿಶುವನ್ನು ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿದ್ದಾರೆ.
ಏತನ್ಮಧ್ಯೆ, ಒಂಬತ್ತು ತಿಂಗಳ ಗರ್ಭಿಣಿ ಲಕ್ಷ್ಮಿಏಕೆ ಆತ್ಮಹತ್ಯೆ ಮಾಡಿಕೊಂಡಳೆಂದು ಇನ್ನೂ ತಿಳಿದುಬಂದಿಲ್ಲ. ಇದಾಗಲೇ ನಾಲ್ಕು ಮಕ್ಕಳನ್ನು ಹೊಂದಿದ್ದ ಲಕ್ಷ್ಮಿ ಹಿರಿಯ ಮಗಳು 16 ವರ್ಷದವಳಾಗಿದ್ದಾಳೆ.