ಕ್ಯಾಪ್ಟನ್ ಜೈ ನಾರಾಯಣ್ ಪ್ರಸಾದ್ ನಿಶಾದ್
ನವದೆಹಲಿ: ಮಾಜಿ ಕೇಂದ್ರ ಸಚಿವ ಕ್ಯಾಪ್ಟನ್ ಜೈ ನಾರಾಯಣ್ ಪ್ರಸಾದ್ ನಿಶಾದ್ ಸೋಮವಾರ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ನಾರಾಯಣ್ ಪ್ರಸಾದ್ ಮಾಜಿ ಕೇಂದ್ರ ಸಚಿವರಾಗಿದ್ದು ಬಿಹಾರದ ಮುಜಾಫಿರ್ ಪುರ್ ಲೋಕಸಭೆ ಕ್ಷೇತ್ರದ ಸಂಸದರಾಗಿ ಸಹ ಸೇವೆ ಸಲ್ಲಿಸಿದ್ದರು.
ದಕ್ಷೀಣ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ನಿಶಾದ್ ನಿಧನರಾದರು.
ಮಾಜಿ ಕೇಂದ್ರ ಸಚಿವರೂ ಆಗಿದ್ದ ನಿಶಾದ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. "ಕ್ಯಾಪ್ಟನ್ ಜೈ ನಾರಾಯಣ್ ಪ್ರಸಾದ್ ನಿಶಾದ್ ಅವರ ನಿಧನದಿಂದ ದುಃಖಿತನಾಗಿದ್ದೇನೆ.ಅವರು ನಮ್ಮ ದೇಶಕ್ಕೆ ಬಹಳ ಶ್ರದ್ದೆಯಿಂದ ಸೇವೆ ಸಲ್ಲಿಸಿದ್ದರು. ಬಿಹಾರದ ಪ್ರಗತಿಗೆ ಕ್ಯಾಪ್ಟನ್ ನಿಶಾದ್ ಅವರ ಪ್ರಯತ್ನಗಳು ಗಮನಾರ್ಹವಾಗಿವೆ. ಬಡವರನ್ನು ಉದ್ದರಿಸುವ ಅವರ ಕಾರ್ಯಗಳು ಎಂದಿಗೂ ಸ್ಮರಣೀಯ.ಅವರ ಕುಟುಂಬ ಮತ್ತು ಆತ್ಮೀಯರಿಗೆ ಅವರ ಸಾವನ್ನು ಭರಿಸುವ ಶಕ್ತಿ ಒದಗಲಿ" ಮೋದಿ ಟ್ವೀಟ್ ಮಾಡಿದ್ದಾರೆ.
ಕ್ಯಾಪ್ಟನ್ ನಿಶಾದ್ ನಿಧನಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಸಂತಾಪ ವ್ಯಕ್ತಪಡಿಸಿದ್ದಾರೆ..