ರಾಕಿಂಗ್ ಸ್ಟಾರ್ ಯಶ್ ರನ್ನು ಶೋ ಮ್ಯಾನ್ ಎಂದು ವಿವಾದಕ್ಕೆ ಗುರಿಯಾಗಿದ್ದ ರಶ್ಮಿಕಾ ಮಂದಣ್ಣ ಇದೀಗ ಕೆಜಿಎಫ್ ಭರ್ಜರಿ ಪ್ರದರ್ಶನದ ಬಳಿಕ ತಮ್ಮ ಮಾತಿನ ವರಸೆಯನ್ನು ಬದಲಿಸಿದ್ದಾರೆ.
ಕೆಜಿಎಫ್ ಚಿತ್ರ ನೋಡಿ ಕ್ಲೀನ್ ಬೌಲ್ಡ್ ಆಗಿರುವ ರಶ್ಮಿಕಾ ಮಂದಣ್ಣ ಇದೀಗ ಯಶ್ ಅಭಿನಯಕ್ಕೆ ಮನಸೋತಿದ್ದಾರೆ. ಚಿತ್ರದ ಸ್ಕ್ರೀನ್ ಪ್ಲೇ ನೋಡಿ ದಂಗಾಗಿರುವ ಅವರು ಚಿತ್ರದ ಬಗ್ಗೆ ಹಾಡಿ ಹೊಗಳಿದ್ದಾರೆ.
ಕೆಜಿಎಫ್ ಚಿತ್ರದ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಸಿನಿಮಾ ನೋಡಿ ನನಗೆ ತುಂಬಾನೆ ಹೆಮ್ಮೆ ಅನಿಸಿದೆ. ಇಂತಹ ಸಿನಿಮಾವನ್ನು ಕೊಟ್ಟ ಹೊಂಬಾಳೆ ಬ್ಯಾನರ್ ಗೂ ಧನ್ಯವಾದ ಅಂತ ಬರೆದುಕೊಂಡಿದ್ದಾರೆ.
ಸದ್ಯ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಚಿತ್ರ ಭಾರತದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ನಾಲ್ಕು ದಿನಕ್ಕೆ 75 ಕೋಟಿ ರುಪಾಯಿ ಗಳಿಸಿ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ.