ದೇಶ

ವರ್ಷದ ಕೊನೆಯ 'ಮನ್ ಕಿ ಬಾತ್': ದೇಶದ ಪ್ರಗತಿಗಾಗಿ ಕಾರ್ಯ ನಿರ್ವಹಿಸುವಂತೆ ಜನತೆಗೆ ಪ್ರಧಾನಿ ಮೋದಿ ಕರೆ

Manjula VN
ನವದೆಹಲಿ: ಪ್ರಸಕ್ತ ವರ್ಷದ ಕೊನೆಯ ಮನ್ ಬಾತ್ ಕಿ ಮಾತ್ ನಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ದೇಶದ ಪ್ರಗತಿಗಾಗಿ, ಸಮಾಜವನ್ನು ಮುಂದಕ್ಕೆ ಸಾಗಿಸಲು ಕೆಲಸ ಮಾಡುವಂತೆ ಕರೆ ನೀಡಿದ್ದಾರೆ. 
2018 ವರ್ಷ ಅಂತ್ಯಗೊಳ್ಳುತ್ತಿದ್ದು, 2019ನೇ ನೂತನ ವರ್ಷ ಆರಂಭವಾಗುತ್ತಿದೆ. ಕಳೆದ ವರ್ಷದ ಕುರಿತು ಚರ್ಚೆಗಳು ನಡೆಯುವುದು ಸಾಮಾನ್ಯ. ಹೊಸ ವರ್ಷ ಬರುತ್ತಿದ್ದು, ಸಂಕಲ್ಪ ಮಾಡುವ ಸಮಯ ಕೂಡ ಹತ್ತಿರ ಬಂದಿದೆ. ನಮ್ಮ ಜೀವನವನ್ನು ನಾವು ಬದಲಿಸಿಕೊಳ್ಳಬೇಕು. ದೇಶ ಹಾಗೂ ಸಮಾಜದ ಪ್ರಗತಿಗಾಗಿ ಕೊಡುಗೆ ನೀಡಬೇಕೆಂದು ಹೇಳಿದ್ದಾರೆ. 
ಇದೇ ವೇಶೆ ಸರ್ಕಾರ ಸಾಧನೆಗಳ ಕುರಿತಂತೆ ಮೋದಿಯವರು ಮಾತನಾಡಿದ್ದಾರೆ. ದೇಶ ಇಂದು ಪ್ರಗತಿಯತ್ತ ಸಾಗಲು ಪ್ರಮುಖ ಕಾರಣ ಇಲ್ಲಿನ ಜನತೆ. 2018ರಲ್ಲಿ ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಸ್ಟ್ಯಾಚು ಆಫ್ ಯುನಿಟಿ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ನಮ್ಮ ಪರಿಶ್ರಮದಿಂದ ದೇಶ ಇಂದು ಪ್ರಗತಿ ಕಾಣುತ್ತಿದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಭಾರತೀಯ ಅಥ್ಲೀಟ್ ಗಳನ್ನು ಕೊಂಡಾಡಿರುವ ಅವರು, ಏಷ್ಯನ್ ಗೇಮ್ಸ್ ನಲ್ಲಿ ಭಾರತ ಸಾಕಷ್ಟು ಪದಕಗಳನ್ನು ಗೆತ್ತುಕೊಂಡಿದೆ. ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲೂ ಭಾರತ ಉತ್ತಮ ಪ್ರದರ್ಶನವನ್ನು ನೀಡಿದೆ ಎಂದಿದ್ದಾರೆ. 
ಸೂಲಗಿತ್ತಿ ನರಸಮ್ಮರಿಗೆ ನಮನ ಸಲ್ಲಿಸಿದ ಪ್ರಧಾನಿ
ಇತ್ತೀಚೆಗಷ್ಟೇ ನಿಧನರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತ ನರಸಮ್ಮ ಅವರಿಗೆ ಪ್ರಧಾನಿ ಮೋದಿಯವರು ಮನ್ ಕಿ ಬಾತ್ ನಲ್ಲಿ ನಮನ ಸಲ್ಲಿಸಿದ್ದಾರೆ. 

ಸೂಲಗಿತ್ತಿ ನರಸಮ್ಮ ಅವರು ಸಾವಿರಾರು ತಾಯಂದಿರಿಗೆ ತಾಯಿಯಾಗಿದ್ದರು. ಸಾವಿರಾರು ಗ್ರಾಮೀಣ ತಾಯಂದಿರ ಹೆರಿಗೆ ಸಮಯದಲ್ಲಿ ಮಹಾತಾಯಿಯಾಗಿ ಸೇವೆ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸೂಲಗಿತ್ತಿ ನರಸಮ್ಮ ಅವರಿಗೆ ವಿಶೇಷ ಸ್ಥಾನಮಾನವಿತ್ತು. ತಮ್ಮ ಜೀವನವನ್ನು ಇತರಿರಿಗೆ ಮಾದರಿಯಾಗುವಂತೆ ಅವರು ಬದುಕಿದ್ದರು. ಸಮಾಜಕ್ಕೆ ದೊಡ್ಡ ಮಟ್ಟದ ಸೇವೆಯನ್ನು ಅರ್ಪಿಸಿದ್ದಾರೆಂದು ಹೇಳಿದ್ದಾರೆ. 
SCROLL FOR NEXT