ಜಮ್ಮು-ಕಾಶ್ಮೀರ: ಸೇನಾ ಕೇಂದ್ರ ಮೇಲೆ ನಡೆಯಬೇಕಿದ್ದ ದಾಳಿ ಸಂಚು ವಿಫಲಗೊಳಿಸಿದ ಭದ್ರತಾಪಡೆ
ಜಮ್ಮು ಮತ್ತು ಕಾಶ್ಮೀರ ಸೇನಾ ಕೇಂದ್ರದ ಮೇಲೆ ದಾಳಿ ನಡೆಯಬೇಕಿದ್ದ ದಾಳಿ ಸಂಚನ್ನು ಭಾರತೀಯ ಸೇನಾಪಡೆಗಳು ಭಾನುವಾರ ವಿಫಲಗೊಳ್ಳುವಂತೆ ಮಾಡಿದೆ...
ಜಮ್ಮು: ಜಮ್ಮು ಮತ್ತು ಕಾಶ್ಮೀರ ಸೇನಾ ಕೇಂದ್ರದ ಮೇಲೆ ದಾಳಿ ನಡೆಯಬೇಕಿದ್ದ ದಾಳಿ ಸಂಚನ್ನು ಭಾರತೀಯ ಸೇನಾಪಡೆಗಳು ಭಾನುವಾರ ವಿಫಲಗೊಳ್ಳುವಂತೆ ಮಾಡಿದೆ.
ಜಮ್ಮುವಿನ ರಟ್ನುಚಕ್ ಸೇನಾ ಕೇಂದ್ರದ ಬಳಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅನುಮಾನಾಸ್ಪದ ಓಡಾಟಗಳನ್ನು ಭದ್ರತಾಪಡೆಗಳು ಗಮನಿಸಿದ್ದಾರೆ. ಮುಸುಧಾರಿಗಳಾಗಿ ಬಂದ ಇಬ್ಬರು ವ್ಯಕ್ತಿಗಳು ಸೇನಾ ಮುಖ್ಯದ್ವಾರದ ಬಳಿ ಬಂದಿದ್ದಾರೆ. ಇದನ್ನು ಗಮನಿಸಿದ ಭದ್ರತಾಪಡೆಗಳು ಗುಂಡಿನ ದಾಳಿ ನಡೆಸಿ ಹಿಮ್ಮೆಟ್ಟಿಸಿದ್ದಾರೆ.
ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸುತ್ತಿದ್ದಂತೆಯೇ ಪ್ರತಿ ದಾಳಿ ನಡೆಸಿದ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಸೇನಾಪಡೆಗಳು ಕಾರ್ಯಾಚರಣೆ ಆರಂಭಿಸಿವೆ ಎಂದು ತಿಳಿದುಬಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.