ಮೇಘಾಲಯ ಗಣಿ ದುರಂತ: 19ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
ಕ್ಸಾನ್(ಮೇಘಾಲಯ): ಮೇಘಾಲಯದಲ್ಲಿ ಸಂಭವಿಸಿದ ಗಣಿ ದುರಂತದಲ್ಲಿ ಸಿಲುಕಿದ್ದ ಹದಿನೈದು ಗಣಿ ಕಾರ್ಮಿಕರ ರಕ್ಷಣಾ ಕಾರ್ಯಾಚರ್ಣೆ ಹತ್ತೊಂಬತ್ತನೇ ದಿನವಾದ ಇಂದೂ ಮುಂದುವರಿದಿದೆ.
ಭಾರತೀಯ ನೌಕಾದಳವು ಇಂದು ಸ್ಥಳದಲ್ಲಿ ಕೆಲ ಮರದ ರಚನೆಗಳಲ್ಲಿ ಕಲ್ಲಿದ್ದಿಲನ್ನಿಟ್ಟಿರುವುದನ್ನು ಪತ್ತೆ ಮಾಡಿದೆ ಅಲ್ಲದೆ ಒಂದು ಬಿಲವನ್ನೂ ಸಹ ಗುರುತಿಸಿದೆ.ನೀರಿನೊಳಗೆ ಚಲಿಸಬಲ್ಲ ರಿಮೋಟ್ ಕಂಟ್ರೋಲ್ ವಾಹನ ಬಳಸಿ ನೌಕಾದಳವು 370 ಅಡಿ ಆಳದವರೆಗೆ ಪ್ರವೇಶಿಸಿದೆ,.ಆ ವೇಳೆ ಕೆಲವು ಮರದ ರಚನೆಗಳು, ಕಲ್ಲಿದ್ದಲು ತಳದಲ್ಲ್ರುವಂತೆ ಇದ್ದು ಜತೆಗೊಂದು ಬಿಲವು ಕಾಣಿಸಿದೆ. ಪ್ರವಾಹಪೀಡಿತ ಗಣಿಯಲ್ಲಿ ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದ ನಂತರ ಈ ಗುರುತುಗಳು ಪತ್ತೆಯಾಗಿದೆ ಎಂದು ಕಾರ್ಯಾಚರಣೆ ಕುರಿತ ಮಾಹಿತಿ ವಕ್ರಾ ಆರ್, ಸುಸ್ನಗಿ ಹೇಳಿದ್ದಾರೆ.
ಆದರೆ ಇದುವರೆಗೆ ಯಾವೂಬ್ಬ ಗಣಿ ಕಾರ್ಮಿಕನ ಗುರುತೂ ಪತ್ತೆಯಾಗಿಲ್ಲ.ಅಲ್ಲದೆ ಕೆಳಗೆ ಹೋದಂತೆಲ್ಲಾ ಬೆಳಕಿನ ಗೋಚರತೆ ಬಹಳ ಕಡಿಮೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಒಂದೊಮೆ ನೀರಿನ ಮಟ್ಟ ಕಡಿಮೆಯಾದರೆ ಮಾತ್ರವೇ ಸಿಕ್ಕಿಬಿದ್ದ ಗಣಿ ಕಾರ್ಮಿಕರ ಹುಡುಕಾಟ ಸಾಧ್ಯವಾಗಲಿದೆ. ಎಂಬುದಾಗಿ ಅವರು ಹೇಳಿದ್ದಾರೆ.
"ಪ್ರಸ್ತುತ, ಒಡಿಶಾ ಅಗ್ನಿಶಾಮಕ ದಳದವರು ಗಣಿ ಕಾರ್ಮಿಕರು ಸಿಲುಕಿರುವ ಮುಖ್ಯ ಶಾಖೆಯಿಂದ ನೀರನ್ನು ಹೊರಹಾಕಲು ಪ್ರಯತ್ನಿಸಿದ್ದಾರೆ.ಅಗ್ನಿಶಾಮಕ ಪಡೆಗಳು ಪಂಪ್ ಗಳನ್ನು ಬಳಸಿ ಈ ಕಾರ್ಯಾಚರಣೆಗಿಳಿದಿವೆ."
ಭಾರತೀಯ ನೌಕಾಪಡೆಯ 14 ಸದಸ್ಯರು, 72 ಎನ್ಡಿಆರ್ಎಫ್ ಯೋಧರು, 21 ಒಡಿಶಾ ಅಗ್ನಿಶಾಮಕ ದಳಗಳು, 35 ಕೋಲ್ ಇಂಡಿಯಾ ಲಿಮಿಟೆಡ್ ಅಧಿಕಾರಿಗಳು ಮತ್ತು ಮೇಘಾಲಯ-ಸ್ವಾಮ್ಯದ ರಾಜ್ಯ ವಿಪತ್ತು ನಿರ್ವಹಣೆ ಯೆ ಪಡೆಗಳ ತಂಡ ಸೇರಿದಂತೆ 200ಕ್ಕೂ ಹೆಚ್ಚು ತುರ್ತು ಕಾರ್ಯನಿರ್ವಹಣಾ ಪಡೆ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನಿಯೋಜಿಸಲ್ಪಟ್ಟಿದ್ದಾರೆ. ನಿಮಿಷಕ್ಕೆ 500 ಗ್ಯಾಲನ್ ನೀರನ್ನು ಹೊರಹರಿಸಬಲ್ಲ ಎಂಟು ಸಬ್ ಮರ್ಸಿಬಲ್ ಪಂಪ್ ಗಓಡನೆ ಈ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕೋಲ್ ಇಂಡಿಯಾ ಲಿಮಿಟೆಡ್ (ನಾರ್ತ್ಈಸ್ಟರ್ನ್ ಕೋಲ್ಫೀಲ್ಡ್ಸ್), ಜನರಲ್ ಮ್ಯಾನೇಜರ್ ಆಗಿರುವ ಜೆ ಎ ಬೋರಾಹ್ ಹೇಳಿದ್ದಾರೆ.