ಶ್ರೀನಗರ: 9,730 ಕಲ್ಲುತೂರಾಟಗಾರರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ಕಾಶ್ಮೀರ ಸರ್ಕಾರ ನಿರ್ಧರಿಸಿದೆ.
2008-2017 ನಡುವಿನ ಅವಧಿಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯಲು ಜಮ್ಮು-ಕಾಶ್ಮೀರ ಸರ್ಕಾರ ನಿರ್ಧರಿಸಿದ್ದು, ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ 1,745 ಪ್ರಕರಣಗಳನ್ನು ಷರತ್ತು ಬದ್ಧವಾಗಿ ವಾಪಸ್ ಪಡೆಯಲು ಮುಫ್ತಿ ಸರ್ಕಾರ ನಿರ್ಧರಿಸಿದೆ.
ಇದೇ ವೇಳೆ 4,000 ಕ್ಷಮಾದಾನ ನೀಡಲು ಸರ್ಕಾರ ನಿರ್ಧರಿಸಿದೆ ಎಂದೂ ಮೆಹಬೂಬಾ ಮುಫ್ತಿ ತಿಳಿಸಿದ್ದು ಈ ಬಗ್ಗೆ ವಿಧಾನಸಭೆಗೆ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಿದ್ದಾರೆ. 2016 ಹಾಗೂ 2017 ರ ಅವಧಿಯಲ್ಲಿ 3,773 ಪ್ರಕರಣಗಳು ದಾಖಲಾಗಿದ್ದು, 11, 290 ಜನರನ್ನು ಬಂಧಿಸಲಾಗಿದೆ ಎಂದು ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.