ನವದೆಹಲಿ: ದೇಶದ ಅತಿದೊಡ್ಡ ಕಬ್ಬಿಣ ಅದಿರು ಉತ್ಪಾದನಾ ಪ್ರದೇಶವಾದ ಗೋವಾದಲ್ಲಿ ಅದಿರು ಗಣಿಗಾರಿಕೆ ಪರವಾನಗಿಗಳನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ ಎಂದು ಸ್ಥಳೀಯ ಟಿವಿ ವಾಹಿನಿಗಳು ವರದಿ ಮಾಡಿದೆ.
ಕಡಿಮೆ ಗುಣಮಟ್ಟದ ಕಬ್ಬಿಣದ ಅದಿರಿಗೆ ಹೆಸರುವಾಸಿಯಾದ ಗೋವಾ ಕಬ್ಬಿಣ ಗಣಿಗಾರಿಕೆಯು ಮಾರ್ಚ್ 15ರ ನಂತರ ಸ್ಥಗಿತಗೊಳ್ಳಲಿದ್ದು ಹೊಸ ಪರವಾನಗಿಗಳನ್ನು ಇನ್ನಷ್ಟೇ ನೀಡಬೇಕಿದೆ ಎಂದು ನ್ಯಾಯಾಲಯ ಹೇಳಿದೆ. ಪರಿಸರ ವಿನಾಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ನಿಷೇಧಿಸಬೇಕೆಂದು ಗೋವಾದ ಸಾಮಾಜಿಕ ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯದ ಈ ಕ್ರಮದಿಂಡ 2012ರಿಂದಲೂ ಗೋವಾದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಚಟುವಟಿಕೆ ಕೊನೆಗೊಳ್ಳುವಂತಾಗಿದೆ. ನಿಷೇಧಕ್ಕೆ ಮುನ್ನ ಗೋವಾ ಸುಮಾರು 50 ಮಿಲಿಯನ್ ಟನ್ ಕಬ್ಬಿಣದ ಅದಿರನ್ನು ರಫ್ತು ಮಾಡುತ್ತಿತ್ತು.
ನ್ಯಾಯಾಲಯದ ಆದೇಶವು ಗೋವಾದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ವೇದಾಂತ ರಿಸೋರ್ಸ್ ನಂತಹಾ ಕಂಪೆನಿಗಳಿಗೆ ಭಾರೀ ಹೊಡೆತ ಬಿದ್ದಿದೆ. ಗೋವಾದ ಕಬ್ಬಿಣ ಅದಿರಿನ ಬಹುತೇಕ ಭಾಗ ಚೀನಾಕ್ಕೆ ರಫ್ತು ಆಗುತ್ತಿತ್ತು. ವಿಶೇಷವೆಂದರೆ ಭಾರತೀಯ ಕಂಪೆನಿಗಳು ಅವುಗಳನ್ನು ಬಳಸುವ ತಂತ್ರಜ್ಞಾನವನ್ನು ಹೊಂದಿಲ್ಲ.