ನವದೆಹಲಿ: ಸಂಸದೀಯ ಕಾರ್ಯದರ್ಶಿಗಳಾಗಿ ಸರ್ಕಾರಿ ವಾಹನ ಸೇರಿದಂತೆ ಯಾವುದೇ ಸಂಭಾವನೆ, ಲಾಭ ಮತ್ತು ವಿಶೇಷ ಸವಲತ್ತುಗಳನ್ನು ಪಡೆದಿಲ್ಲ ಎಂದು ಅನರ್ಹಗೊಂಡ ಆಮ್ ಆದ್ಮಿ ಪಕ್ಷದ ಶಾಸಕರು ಗುರುವಾರ ಹೈಕೋರ್ಟ್ ನಲ್ಲಿ ವಾದಿಸಿದ್ದಾರೆ.
ಲಾಭದಾಯಕ ಹುದ್ದೆ ಹೊಂದಿದ ಆರೋಪದ ಮೇಲೆ 20 ಆಪ್ ಶಾಸಕರನ್ನು ಚುನಾವಣಾ ಆಯೋಗ ಅನರ್ಹಗೊಳಿಸಿದ್ದು, ಅದನ್ನು ಪ್ರಶ್ನಿಸಿ ಶಾಸಕರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಚಂದರ್ ಶೇಖರ್ ಅವರು ಇಂದು ವಿಚಾರಣೆ ನಡೆಸಿದರು.
ಯಾರೊ ಒಬ್ಬರು ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂದರೆ ಮೊದಲು ಅದು ಅಧಿಕಾರಕ್ಕಾಗಿ ಎಂದು ನಿರ್ಣಯಿಸಲಾಗುತ್ತದೆ. ಇತರೆ ವಿಚಾರಗಳು ನಂತರ ಬರುತ್ತವೆ. ಆ ಹುದ್ದೆಯಿಂದ ಲಾಭವಾಗುತ್ತದೆಯೋ ಅಥವಾ ಇಲ್ಲ ಎಂಬುದನ್ನು ನಂತರ ಪರಿಗಣಿಸಲಾಗುವುದು ಎಂದು ಕೋರ್ಟ್ ಹೇಳಿದೆ.
ಲಾಭದಾಯಕ ಹುದ್ದೆ ಹೊಂದಿದ್ದು ಯಾವುದೇ ಸಂಭಾವನೆ ಅಥವಾ ಲಾಭ ಪಡೆಯದಿದ್ದರೂ ಆ ಹುದ್ದೆ ಹಣಕಾಸಿನ ಲಾಭ ತರುವ ಸಾಮರ್ಥ್ಯ ಹೊಂದಿದ್ದರೆ, ಅದನ್ನು ಲಾಭದಾಯಕ ಹುದ್ದೆ ಎಂದು ಪರಿಗಣಿಸುವುದಾಗಿ ಹೈಕೋರ್ಟ್ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics