1984 ಸಿಖ್ ವಿರೋಧಿ ಗಲಭೆ: ಹರ್ಸಿಮ್ರತ್ ಕೌರ್ ರಿಂದ ಗೃಹ ಸಚಿವರ ಭೇಟಿ, ಟೈಟ್ಲರ್ ಬಂಧನಕ್ಕೆ ಮನವಿ
ನವದೆಹಲಿ: ಕೇಂದ್ರ ಸಚಿವರಾದ ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಶಿರೋಮಣಿ ಅಕಾಲಿ ದಳ (ಎಸ್ಎಡಿ) ನಾಯಕ ನರೇಶ್ ಗುಜ್ರಾಲ್ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ 1984 ರ ಸಿಖ್ ವಿರೋಧಿ ಗಲಭೆಗಳಿಗೆ ಸಂಬಂಧಿಸಿದಂತೆ ಜಗದೀಶ್ ಟೈಟ್ಲರ್ ನ್ನು ಬಂಧಿಸುವಂತೆ ಮನವಿ ಸಲ್ಲಿಸಿದ್ದಾರೆ.
ಸಿಖ್ ವಿರೋಧಿ ಗಲಭೆ ಸಂಬಂಧ ತನಿಖೆ ಪ್ರಾರಂಭಿಸಲು ಅವರು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಕೋರಿದ್ದಾರೆ. 1984 ರ ಸಿಖ್ ವಿರೋಧಿ ದಂಗೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಟೈಟ್ಲರ್ ತನ್ನ ಪಾತ್ರದ ಬಗ್ಗೆ ಮಾತನಾಡಿರುವ ವೀಡಿಯೊ ಬಹಿರಂಗಗೊಂಡ ನಂತರ ಈ ಬೆಳವಣಿಗೆ ನಡೆದಿದೆ.
ಆಗಿನ ಪ್ರಧಾನಿ ರಾಜೀವ್ ಗಾಂಧಿ ಪರಿಸ್ಥಿತಿಯನ್ನು ಅವಲೋಕಿಸಿ, ಗಲಭೆಯನ್ನು ಸೃಷ್ಟಿಸುವಂತೆ ಕೇಳಿಕೊಂಡಿದ್ದರೆಂದು ಟೈಟ್ಲರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಇಂದು ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಹರ್ಸಿಮ್ರತ್ ಕೌರ್ ತನಿಖಾ ಏಜೆನ್ಸಿಗಳು ತನಿಖೆಯನ್ನು ನಡೆಸಿದ್ದು ಅದು ನಿರುಪಯುಕ್ತವಾಗಿದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
1984 ರ ಸಿಖ್ ನರಮೇಧದ ಪ್ರಮುಖ ಆರೋಪಿ ಜಗದೀಶ್ ಟೈಟ್ಲರ್ ಮೇಲೆ ನಡೆದ ಸ್ಟಿಂಗ್ ಕಾರ್ಯಾಚರಣೆಯ ಸಂದರ್ಭದಲ್ಲಿ ಶಿರೋಮಣಿ ಅಕಾಲಿ ದಳದ ಸಂಸತ್ ಸದಸ್ಯರು ಮತ್ತು ಕಚೇರಿ ಅಧಿಕಾರಿಗಳನ್ನು ಆಘಾತಕ್ಕೆ ಈಡು ಮಾಡಿದ್ದಾರೆ. ಸಿಖ್ ನರಮೇಧದ ಕುರಿತಾಗಿ ತಾನು ನೀಡಿದ ಹೇಳಿಕೆಯಿಂದಲೇ ಟೈಟ್ಲರ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಆದರೆ ತನಿಕಾ ಏಜನ್ಸಿಗಳು ಂಆತ್ರ ಯಾವ ಕ್ರಮ ಕೈಗೊಳ್ಳಲಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ.